(ನ್ಯೂಸ್ ಕಡಬ) newskadaba.com ಕಡಬ, ಮಾ.08. ಮೊಬೈಲ್ ಕ್ಷೇತ್ರದಲ್ಲಿ ಸಂಚಲನವನ್ನೇ ಮೂಡಿಸಿದ್ದ ರಿಲಯನ್ಸ್ ಕಂಪೆನಿಯ ಜಿಯೋ ಇದೀಗ ಕಡಬಕ್ಕೂ ಲಗ್ಗೆಯಿಟ್ಟಿದ್ದು, ಮೊದಲ ಹಂತವಾಗಿ ಸೇವಾಕೇಂದ್ರವನ್ನು ಆರಂಭಗೊಳಿಸಿದೆ.
ಏರ್ ಟೆಲ್, ಐಡಿಯಾ, ಬಿಎಸ್ಎನ್ಎಲ್ ಕಂಪೆನಿಗಳ ತೀವ್ರ ತರದ ನೆಟ್‌ವರ್ಕ್ ಸಮಸ್ಯೆಗಳಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರು ಪರ್ಯಾಯ ನೆಟ್‌ವರ್ಕ್ ಗಾಗಿ ಕಾದು ಕುಳಿತಿದ್ದರು. ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಮಾತ್ರ ಜಿಯೋ ತನ್ನ ನೆಟ್‌ವರ್ಕ್ ನ್ನು ಹೊಂದಿತ್ತು. ಇದೀಗ ಕಡಬ ತಾಲೂಕಿನ ಮೂಲೆ ಮೂಲೆಗೂ ನೆಟ್‌ವರ್ಕ್ ಹೊಂದಿಸುವ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಗ್ರಾಹಕರಿಗೆ ತನ್ನ ಸೇವೆಯನ್ನು ನೀಡಲಿದೆ. ಪ್ರಸ್ತುತ ಆತೂರುವರೆಗೆ ಮಾತ್ರ ನೆಟ್‌ವರ್ಕ್ ಸಿಗುತ್ತಿದ್ದು, ಮುಂದುವರಿದು ಕಡಬ ತಾಲೂಕಿನ ಆಲಂಕಾರು, ಕುಂತೂರು, ಹೊಸ್ಮಠ, ಕಡಬ, ಕೋಡಿಂಬಾಳ, ಬಳ್ಪ, ಇಚಿಲಂಪಾಡಿ, ನೆಲ್ಯಾಡಿ, ಮರ್ಧಾಳ, ನೆಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಜಿಯೋ ಕಾರ್ಯಾರಂಭಿಸಲಿದ್ದು, ಪ್ರಥಮ ಹೆಜ್ಜೆಯಾಗಿ ಜಿಯೋ ಗ್ರಾಹಕ ಸೇವಾ ಕೇಂದ್ರವು ಕಡಬದಲ್ಲಿ ಬುಧವಾರದಂದು ಶುಭಾರಂಭಗೊಂಡಿದೆ.