ಕಡಬ: ವಿಷಸೇವಿಸಿ ಅಸ್ವಸ್ಥರಾಗಿದ್ದ ವೃದ್ದ ಮೃತ್ಯು..!

Death, deadbody, Waterfall

(ನ್ಯೂಸ್ ಕಡಬ) newskadaba.com ಕಡಬ, ಸೆ. 13. ವಿಷ ಸೇವಿಸಿ ಅಸ್ವಸ್ಥರಾಗಿದ್ದ ವೃದ್ಧರೋರ್ವರು ಮೃತಪಟ್ಟಿರುವ ಘಟನೆ ತಾಲೂಕಿನ ಬಲ್ಯ ಗ್ರಾಮದಿಂದ ವರದಿಯಾಗಿದೆ.


ಮೃತರನ್ನು ಬಲ್ಯ ಗ್ರಾಮದ ದೇರಾಜೆ ಮಾದೇರಿಕೆ ನಿವಾಸಿ ಕುಶಾಲಪ್ಪ ಗೌಡ(75) ಎಂದು ಗುರುತಿಸಲಾಗಿದೆ. ಇವರು ಕಳೆದ 2 ವರ್ಷಗಳಿಂದ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದು ಈ ಬಗ್ಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರೂ ಸರಿಯಾಗಿ ಗುಣಮುಖವಾಗದ ಕಾರಣ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಸೆ.12ರ ಗುರುವಾರದಂದು ಇವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಯಾವುದೋ ವಿಷ ಪದಾರ್ಥ ಸೇವಿಸಿದ್ದು, ತೋಟಕ್ಕೆ ಹೋಗಿದ್ದ ಅವರ ಪತ್ನಿ ಮತ್ತು ತಂಗಿ ಮನೆಗೆ ಬಂದ ವೇಳೆ ಕುಶಾಲಪ್ಪ ಗೌಡರು ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ.

Scroll to Top