ಮಂಗಳೂರು: ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ‘ವಿಶ್ವ ಫಿಸಿಯೋಥೆರಪಿ’ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12.  ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿ (ಎಫ್‌ಎಂಸಿಒಪಿ)ಆಶ್ರಯದಲ್ಲಿ ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ವಿಶ್ವ ಫಿಸಿಯೋಥೆರಪಿ ದಿನಾಚರಣೆ ನಡೆಯಿತು.


ಅಧ್ಯಕ್ಷತೆಯನ್ನು ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ.ಫಾದರ್ ಕ್ಲಿಫರ್ಡ್ ಸಿಕ್ವೇರಾ ಎಸ್.ಜೆ ವಹಿಸಿದ್ದರು. ಎಫ್‌ಎಂಸಿಒಪಿಯ ಪ್ರಾಂಶುಪಾಲೆ ಪ್ರೊ.ಚೆರಿಶ್ಮಾ ಡಿ ಸಿಲ್ವಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಲೇಡಿಸ್ ಸರ್ಕಲ್ 82ರ ಅಧ್ಯಕ್ಷೆ ನಂದಿತಾ ಪಾಯಸ್ ಮತ್ತು ಮಂಗಳೂರು ರೌಂಡ್ ಟೇಬಲ್ 115ರ ಹಿಂದಿನ ಅಧ್ಯಕ್ಷ ಹಾರೋನ್ ಫೆನಾರ್ಂಡಿಸ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಪಿಯು ಕಾಲೇಜಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಫ್‌ಎಂಸಿಐನ ಸಂಪರ್ಕಾಧಿಕಾರಿ ಡಾ.ಕೆಲ್ವಿನ್ ಪೈಸ್, ಎಚ್‌ಒಡಿ ಆಫ್ ಫಿಸಿಯೋಥೆರಪಿ ಪ್ರೊ. ಸಿಡ್ನಿ ರೋಷನ್, ಸಹ ಪ್ರಾಧ್ಯಾಪಕ ಲಿಯಾ ಮೋಹನ್ ದಾಸ್ ಅನುಪಮಾ ಕೆ , ಅಧ್ಯಾಪಕ ಐಶ್ವರ್ಯ ಗಟ್ಟಿ, ಎಂಎಸ್, ಸೈನ್ನಾ ಡಿಸೋಜ ಭಾಗವಹಿಸಿದ್ದರು.

Also Read  ವಿಟ್ಲ: ತೋಟಕ್ಕೆ ನುಗ್ಗಿ ಕೃಷಿ ನಾಶಗೊಳಿಸಿದ ಕಾಡುಕೋಣ

 

 

error: Content is protected !!
Scroll to Top