3.16 ಲಕ್ಷ ರೂ. ಮೌಲ್ಯದ ಗಾಂಜಾ ರೈಲು ನಿಲ್ದಾಣದ ಬಳಿ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಆ.11. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಅನಾಮಧೇಯ ಬ್ಯಾಗ್‌ ನಲ್ಲಿ ದೊರೆತ ಗಾಂಜಾವನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿಲ್ದಾಣದ ಎರಡನೇ ಫ್ಲ್ಯಾಟ್‌ ಫಾರಂನಲ್ಲಿ ಕಾರವಾರ-ಯಶವಂತಪುರ (ನಂ.16516) ಎಕ್ಸ್ ಪ್ರೆಸ್‌ ರೈಲಿನಲ್ಲಿ 3,16,650 ರೂ. ಮೌಲ್ಯದ 6.333 ಕೆ.ಜಿ. ತೂಕದ ಒಣ ಗಾಂಜಾ ಪತ್ತೆಯಾಗಿತ್ತು.


ರೈಲಿನ ನಿಯಮಿತ ತಪಾಸಣೆ ವೇಳೆ ಪತ್ತೆಯಾದ ಅನಾಮಧೇಯ ಬ್ಯಾಗ್‌ ನಲ್ಲಿ ಗಾಂಜಾ ಕಂಡು ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ಮಂಗಳೂರು ಪೂರ್ವ ಅಬಕಾರಿ ವಿಭಾಗದ‌ಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Scroll to Top