ಹನಿಟ್ರ್ಯಾಪ್ ಪ್ರಕರಣ-  ದಲಿತ ಸೇನೆಯ ರಾಜ್ಯಾಧ್ಯಕ್ಷ ಸಹಿತ ಒಟ್ಟು ಆರು ಮಂದಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಲಬುರಗಿ, ಸೆ. 10. ಯುವತಿಯರನ್ನು ಬಳಸಿಕೊಂಡು ನಗರದಲ್ಲಿ ಹನಿಟ್ರ್ಯಾಪ್ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸೇನೆಯ ರಾಜ್ಯಾಧ್ಯಕ್ಷ ಸಹಿತ ಒಟ್ಟು ಆರು ಜನರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಸರಕಾರಿ ಅಧಿಕಾರಿಗಳು, ಉದ್ಯಮಿಗಳನ್ನೇ ಗುರಿಯಾಗಿರಿಸಿ ಗಾಳ ಹಾಕ್ತಿದ್ದ ಗ್ಯಾಂಗ್, ಯುವತಿಯರನ್ನು ಮುಂದೆ ಬಿಟ್ಟು ಲಾಡ್ಜ್ ಗೆ ಕರೆಸುತ್ತಿದ್ದು, ನಂತರ ತಾವೇ ದಾಳಿ ನಡೆಸಿ, ಪೋಟೋ-ವಿಡಿಯೋ ಚಿತ್ರೀಕರಿಸಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದರು ಎಂದು ಪ್ರಕರಣ ದಾಖಲಾಗಿದೆ.

 

Scroll to Top