ನಿವೃತ್ತ ಗೃಹರಕ್ಷಕರ ಸೇವೆ ಸ್ಮರಣೀಯ- ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಸುಳ್ಯ ಘಟಕದ ಗೃಹರಕ್ಷಕ ಶ್ರೀ ಪ್ರಭಾಕರ ಪೈ ಮತ್ತು ಬೆಳ್ತಂಗಡಿ ಘಟಕದ ಗೃಹರಕ್ಷಕ ಶ್ರೀ ಭಾಸ್ಕರ ಪೂಜಾರಿ ಇವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವು ಮಂಗಳೂರಿನ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ನಡೆಯಿತು.

1964 ಜನವರಿ 23 ರಂದು ಜನಿಸಿದ ಶ್ರೀ ಪ್ರಭಾಕರ ಪೈ, 2007ರ ಅಕ್ಟೋಬರ್ 01 ರಂದು ಗೃಹರಕ್ಷಕ ಇಲಾಖೆಗೆ ಸೇರಿಕೊಂಡು ಸತತವಾಗಿ ಸುಮಾರು 17 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸಿ ಜನವರಿ 21ರಂದು ಸೇವಾ ನಿವೃತ್ತಿ ಪಡೆದರು. ಬೆಳ್ತಂಗಡಿ ಘಟಕದ ಗೃಹರಕ್ಷಕ ಶ್ರೀ ಭಾಸ್ಕರ ಪೂಜಾರಿ 1964 ಮಾರ್ಚ್ 4 ರಂದು ಜನಿಸಿದ ಇವರು 2014 ಏಪ್ರಿಲ್  10 ರಂದು ಗೃಹರಕ್ಷಕದಳಕ್ಕೆ ಸೇರಿಕೊಂಡು 10 ವರ್ಷಗಳಿಂದ ಗೃಹರಕ್ಷಕ ದಳ ಇಲಾಖೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸಿ ಮಾರ್ಚ್ 4ರಂದು ಸೇವಾ ನಿವೃತ್ತಿ ಪಡೆದರು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಸುಳ್ಯ ಘಟಕದ ಗೃಹರಕ್ಷಕ ಶ್ರೀ ಪ್ರಭಾಕರ ಪೈ ಮತ್ತು ಬೆಳ್ತಂಗಡಿ ಘಟಕದ ಗೃಹರಕ್ಷಕ ಶ್ರೀ ಭಾಸ್ಕರ ಪೂಜಾರಿ ಇವರಿಗೆ ಹೂ, ಹಾರ, ಹಣ್ಣು ಹಂಪಲು ನೀಡಿ ಶಾಲು ಹೊದಿಸಿ ಸನ್ಮಾನ ಮಾಡಿದರು.

Also Read  ಸುಳ್ಯ: ಟೆರೇಸ್ ಮೇಲಿಂದ ಬಿದ್ದು ವ್ಯಕ್ತಿ ಗಂಭೀರ

ಈ ಸಂದರ್ಭದಲ್ಲಿ ಡಾ|| ಚೂಂತಾರು ಅವರು ಮಾತನಾಡುತ್ತಾ ನಿವೃತ್ತ ಗೃಹರಕ್ಷಕರ ಸೇವೆ ಬಹಳ ಸ್ಮರಣೀಯ. ಇವರು ಇತರ ಎಲ್ಲಾ ಗೃಹರಕ್ಷಕರಿಗೆ ಮಾದರಿಯಾಗಿ ಕೆಲಸ ಮಾಡಿದ್ದಾರೆ. ನೆರೆಹಾವಳಿ, ಕೋಮುಗಲಭೆ ನಿಯಂತ್ರಣ, ಚುನಾವಣೆ ಬಂದೋಬಸ್ತ್ ಪೊಲೀಸ್ ಠಾಣಾ ಕರ್ತವ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗೃಹರಕ್ಷಕ ಇಲಾಖೆಯ ಗೌರವ ಮತ್ತು ಘನತೆಯನ್ನು ಹೆಚ್ಚಿಸಿದ್ದಾರೆ. ಅವರ ನಿವೃತ್ತಿಯಿಂದ ಇಲಾಖೆಗೆ ಬಹಳ ತುಂಬಲಾರದ ನಷ್ಟ ಎಂದು ನುಡಿದರು. ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಕಛೇರಿ ಸಿಬ್ಬಂದಿ ಶ್ರೀಮತಿ ಮಂಜುಳಾ, ಬೆಳ್ತಂಗಡಿ ಘಟಕದ ಘಟಕಾಧಿಕಾರಿ ಶ್ರೀ ಜಯಾನಂದ, ಕಡಬ ಘಟಕದ ಘಟಕಾಧಿಕಾರಿ ಶ್ರೀ ತೀರ್ಥೇಶ್, ಪುತ್ತೂರು ಘಟಕದ ಅಭಿಮನ್ಯು ರೈ, ಬಂಟ್ವಾಳ ಘಟಕದ ಘಟಕಾಧಿಕಾರಿ ಶ್ರೀ ಐತಪ್ಪ, ಪ್ರಭಾರ ಘಟಕಾಧಿಕಾರಿಗಳಾದ ವಿಟ್ಲದ ಸಂಜೀವ, ಪಣಂಬೂರು ಘಟಕದ ಶಿವಪ್ಪ ನಾಯ್ಕ, ಸುರತ್ಕಲ್‍ ನ ರಮೇಶ್, ಸುಬ್ರಹ್ಮಣ್ಯ ಘಟಕದ ಹರಿಶ್ಚಂದ್ರ, ಉಪ್ಪಿನಂಗಡಿಯ ದಿನೇಶ್ ಬಿ., ಉಳ್ಳಾಲದ ಸುನಿಲ್, ಮೂಡಬಿದ್ರಿಯ ಚಂದ್ರಶೇಖರ್, ಬೆಳ್ತಂಗಡಿಯ ಚಾಕೋ, ವಿನೋದ್ ಆಳ್ವ, ಮಂಗಳೂರಿನ ಸಾರ್ಜಂಟ್ ಶ್ರೀ ಸುನಿಲ್ ಕುಮಾರ್, ಸುಲೋಚನ, ನಿಶಾ, ಚಂಪಾಶ್ರೀ, ಸಂಜಯ್, ರಾಹುಲ್ ಮುಂತಾದವರು ಉಪಸ್ಥಿತರಿದ್ದರು.

Also Read  ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸರಕಾರಿ, ಸರಕಾರೇತರ ನೌಕರರ ಸ್ನೇಹಕೂಟ-ಸಮಿತಿ ರಚನೆ

error: Content is protected !!
Scroll to Top