ಪಂಜ ವಲಯ ಕಾಂಗ್ರೆಸ್ ಮತ್ತು ದಾನಿಗಳಿಂದ ಸಂಗ್ರಹಿಸಿದ ಹಣ ಹಸ್ತಾಂತರ

(ನ್ಯೂಸ್ ಕಡಬ) newskadaba.com ಪಂಜ, ಆ. 31. ಪಂಜ ಐವತ್ತೋಕ್ಲು ಗ್ರಾಮದ ಬೊಳ್ಳಾಜೆ ತಿಮ್ಮಪ್ಪ ಗೌಡರ ಪತ್ನಿಯ ಅಕಾಲಿಕ ಮರಣದಿಂದಾಗಿ ಕಂಗೆಟ್ಟ ತಿಮ್ಮಪ್ಪ ಗೌಡರಿಗೆ  ಬೊಳ್ಳಾಜೆ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಪಂಜ ವಲಯ ಕಾಂಗ್ರೆಸ್ ಮತ್ತು ಊರಿನ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಬೊಳ್ಳಾಜೆ, ಚಿನ್ನಪ್ಪ  ಸಂಕಡ್ಕ, ದಿನೇಶ್ ಪುಂಡಿಮನೆ, ಕುಸುಮಾದರ ಕೆರೆಯಡ್ಕ ಹಾಗೂ ಸತೀಶ್ ಪೂಜಾರಿ ಮನೆ ಉಪಸ್ಥಿತರಿದ್ದರು.

Scroll to Top