ಗನ್ ಒರೆಸುವ ವೇಳೆ ಮಿಸ್ ಫೈರ್ – ವ್ಯಕ್ತಿ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಆ. 27. ಮನೆಯಲ್ಲಿದ್ದ ಗನ್ ಒರೆಸುತ್ತಿದ್ದ ವೇಳೆ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕಳುವಾಸೆ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕಳವಾಸೆ ಗ್ರಾಮದ ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಅವರು ತನ್ನ ಮನೆಯ ಶೆಡ್ ನಲ್ಲಿದ್ದ ಗನ್ ನ್ನು ಒರೆಸುವ ವೇಳೆ ಏಕಾಏಕಿ ಗುಂಡು ಹಾರಿ ಬಲಗಣ್ಣನ್ನು ಹೊಕ್ಕಿದ್ದು, ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top