ಕಾಲ್ ಬಂದ್ರೆ ಹೇಳುತ್ತೆ, ರೈಡಿಂಗಲ್ಲಿದ್ದರೆ ಮೆಸೇಜ್ ಕಳುಹಿಸುತ್ತೆ ► ಬಂದಿದೆ ಸ್ಮಾರ್ಟ್ ಸ್ಕೂಟರ್ ‘ಟಿವಿಎಸ್ ಎನ್‌ಟಾರ್ಕ್ 125’

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಫೆ.25. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸುಧಾರಿತ ತಂತ್ರಜ್ಞಾನ, ಪವರ್ ಫುಲ್ 125 ಸಿಸಿ ಎಂಜಿನ್ ಹೊಂದಿರುವ ಸ್ಪೋರ್ಟಿ ಲುಕ್ ನಲ್ಲಿರುವ ಹೊಸ ಸ್ಕೂಟರೊಂದನ್ನು ಟಿವಿಎಸ್ ಕಂಪೆನಿಯು ಬಿಡುಗಡೆಗೊಳಿಸಿದೆ.

 

ಆಕ್ರಮಣಕಾರಿ ಕ್ರೀಡಾ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿರುವ ಹೊಸ ‘ಟಿವಿಎಸ್ ಎನ್‌ಟಾರ್ಕ್ 125’ ಸ್ಕೂಟರ್‌ ಅಭಿವೃದ್ಧಿಯಲ್ಲಿ ರೇಸ್ ಟ್ರ್ಯಾಕ್‌ ಕೌಶಲ್ಯಗಳನ್ನು ಬಳಕೆ ಮಾಡಿರುವುದರಿಂದ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಮತ್ತಷ್ಟು ಪೈಪೋಟಿಗೆ ವೇದಿಕೆ ಸೃಷ್ಟಿಸಿದೆ. ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಪೆಡಲ್ ಶಿಫ್ಟರ್‌ನಿಂದ ಕಾರ್ಯ ನಿರ್ವಹಿಸಲಿರುವ ಎನ್‌ಟಾರ್ಕ್ 125, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 124.79 ಸಿವಿಐಟಿ ರೆವ್ ಎಂಜಿನ್ ಹೊಂದಿದ್ದು, 9.27-ಬಿಎಚ್‌ಪಿ ಮತ್ತು 10.4-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಪ್ರತೀ ಗಂಟೆಗೆ 95 ಕಿ.ಮೀ. ಟಾಪ್ ಸ್ಪೀಡ್ ಹೊಂದಿದೆ.

 

ಎನ್‌ಟಾರ್ಕ್ 125 ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ ಸ್ಮಾರ್ಟ್ ಕನೆಕ್ಟ್ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಬ್ಲೂಟೂತ್ ಸಂಪರ್ಕ ಹೊಂದಿರುವ ಭಾರತದ ಮೊದಲ ಸ್ಮಾರ್ಟ್ ಸ್ಕೂಟರ್ ಇದಾಗಿದೆ. ಸುಮಾರು ಐದು ವರ್ಷಗಳಷ್ಟು ಮುನ್ನೋಟದ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳಿಸಿರುವ ಸ್ಕೂಟರ್ ನಲ್ಲಿರುವ ಎಲ್‌ಇಡಿ ಸ್ಕ್ರೀನ್ ನಲ್ಲಿ ಎಂಜಿನ್ ಹಾಗೂ ಚಾಲನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ನೇವಿಗೇಷನ್ ಅಸಿಸ್ಟ್, ಕಾಲರ್ ಐಡಿ, ಪಾರ್ಕಿಂಗ್ ಲೊಕೇಷನ್ ಸೇವೆಗಳೊಂದಿಗೆ ಲ್ಯಾಪ್ ಟೈಮರ್, ಟಾಪ್ ಹಾಗೂ ಸರಾಸರಿ ವೇಗದ ಮಾಹಿತಿಯನ್ನು ಕೂಡಾ ನೀಡಲಿದೆ.

Also Read  ಇನ್ಸ್ಟಾಗ್ರಾಮ್ ಬಳಕೆದಾರರೇ ಎಚ್ಚರ.! ➤ ಭಾರತದಲ್ಲಿ ಇನ್ಸ್ಟಾಗ್ರಾಮ್ ಬ್ಯಾನ್

 

ಮುಂಭಾಗದಲ್ಲಿ 30 ಎಂಎಂ ಟೆಲಿಸ್ಕಾಪಿಕ್ ಸಸ್ಷೆಷನ್ ಹಾಗೂ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಜೊತೆಗೆ, 22 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ನೀಡಲಾಗಿದ್ದು, ಮೊಬೈಲ್ ಚಾರ್ಜಿಂಗ್ ಸ್ಲಾಟ್ ಕೂಡಾ ಇರಲಿದೆ. ಮುಂದುಗಡೆ ಆಕರ್ಷಕವಾದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಜತೆಗೆ ಹ್ಯಾಂಡಲ್ ಬಾರ್‌ನಲ್ಲೇ ಇಂಡಿಕೇಟರ್ ಕೊಡಲಾಗಿದ್ದು, ಹಿಂದುಗಡೆ ಎಲ್‌ಇಡಿ ಟೈಲ್ ಲ್ಯಾಂಪ್ ಹಾಗೂ 12 ಇಂಚುಗಳ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ಜೋಡಿಸಲಾಗಿದೆ. ಮ್ಯಾಟ್ ಫಿನಿಶಿಂಗ್ ಮೋಡ್ ನಲ್ಲಿ ಯೆಲ್ಲೋ, ಗ್ರೀನ್, ರೆಡ್ ಹಾಗೂ ವೈಟ್ ಬಣ್ಣಗಳ ಆಯ್ಕೆಯಲ್ಲಿ ಅತೀ ಕಡಿಮೆ ರೂ. 58,750 (ಎಕ್ಸ್ ಶೋರೂಂ) ಬೆಲೆಯಲ್ಲಿ ಲಭ್ಯವಾಗಲಿದ್ದು, ಉಚಿತ ಟೆಸ್ಟ್‌ ರೈಡ್ ಹಾಗೂ ಬುಕ್ಕಿಂಗ್ ಗಾಗಿ ಟಿವಿಎಸ್ ಕಂಪೆನಿಯ ಅಧಿಕೃತ ಮಾರಾಟಗಾರರಾದ ‘ಅಡಿಗ ಮೋಟಾರ್ಸ್’ ಕಡಬ – ಮೊಬೈಲ್: 7618766636 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

Also Read  ಈ ಮಂತ್ರ ಹೇಳುವುದರಿಂದ ನಿಮಗೆ ಮಂಗಳ ದೋಷ ಒಂದೇ ದಿನದಲ್ಲಿ ನಿವಾರಣೆ ಆಗುತ್ತದೆ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top