ಕಂಚಿನ ಪದಕದೊಂದಿಗೆ ಸ್ವದೇಶಕ್ಕೆ ಆಗಮಿಸಿದ ಭಾರತೀಯ ಹಾಕಿ ತಂಡ..!    ಅದ್ದೂರಿ ಸ್ವಾಗತ..!

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10.  ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಭಾರತೀಯ ಪುರುಷರ ಹಾಕಿ ತಂಡವು ಸ್ವದೇಶಕ್ಕೆ ಆಗಮಿಸಿದೆ. ಹರ್ಮಪ್ರೀತ್ ಸಿಂಗ್ ನೇತೃತ್ವದ ತಂಡ ಶನಿವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅದ್ದೂರಿ ಸ್ವಾಗತ ನೀಡಲಾಯಿತು.ಪ್ರತಿಯೊಬ್ಬ ಆಟಗಾರರಿಗೂ ಶಾಲು, ಹೂವಿನ ಹಾರ ಹಾಕುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಆಟಗಾರರು ತಮ್ಮ ಪದಕಗಳನ್ನು ಕ್ಯಾಮರಾಗೆ ತೋರಿಸುವ ಮೂಲಕ ವಿಶಿಷ್ಟವಾಗಿ ಗೆಲುವನ್ನು ಆಚರಿಸಿದರು. ಕೆಲವು ಆಟಗಾರರು ಡ್ರಮ್ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ನರ್ತಿಸಿದರು.

error: Content is protected !!

Join the Group

Join WhatsApp Group