ಮಹಿಳಾ ಟ್ರೈನಿ ಡಾಕ್ಟರ್ ಹತ್ಯೆ ಭುಗಿಲೆದ್ದ ವಿದ್ಯಾರ್ಥಿಗಳ ಆಕ್ರೋಶ..!         ಬೃಹತ್ ಪ್ರತಿಭಟನೆ     

(ನ್ಯೂಸ್ ಕಡಬ)newskadaba.com ಕೋಲ್ಕತ್ತ, ಆ.10. ಸರ್ಕಾರಿ ಸ್ವಾಮ್ಯದ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿಯ ಮಹಿಳಾ ಟ್ರೈನಿ ಡಾಕ್ಟರ್ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆಕೆಯ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ನರ್ಸಿಂಗ್ ವಿದ್ಯಾರ್ಥಿಗಳು ಇಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.ಈ ಮಧ್ಯೆ ಪಶ್ಚಿಮ ಬಂಗಾಳದಾದ್ಯಂತ ರಸ್ತೆ ತಡೆ ನಡೆಸುವುದಾಗಿ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಶನಿವಾರ ತಿಳಿಸಿದ್ದು, ಉತ್ತರ ಕೋಲ್ಕತ್ತಾದ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ಡಾಕ್ಟರ್ ಅರೆ ನಗ್ನ ಶವ ಪತ್ತೆಯಾಗಿತ್ತು.

ಹತ್ಯೆಯನ್ನು ಪ್ರತಿಭಟಿಸಿ ಶನಿವಾರ ಮತ್ತು ಭಾನುವಾರ ಪಶ್ಚಿಮ ಬಂಗಾಳದಾದ್ಯಂತ ರಸ್ತೆ ತಡೆ ನಡೆಸುವುದಾಗಿ ಕ್ರಮವಾಗಿ ಸಿಪಿಐ(ಎಂ) ನ ವಿದ್ಯಾರ್ಥಿಗಳ ಯುವ ಘಟಕಗಳಾದ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ತಿಳಿಸಿವೆ.

Also Read  ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ

error: Content is protected !!
Scroll to Top