ಒಡಿಶಾದಲ್ಲಿ ಭಾರತದ ಮೊದಲ ಅಕ್ಕಿ ಎಟಿಎಂ ನಿರ್ಮಾಣ

(ನ್ಯೂಸ್ ಕಡಬ)newskadaba.comಒಡಿಶಾ, ಆ.09. ಭಾರತದ ಮೊದಲ ಅಕ್ಕಿ ಎಟಿಎಂ ಒಡಿಶಾದಲ್ಲಿ ನಿರ್ಮಾಣವಾಗಿದ್ದು, ಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣ ಸಚಿವ ಕೃಷ್ಣ ಚಂದ್ರ ಪಾತ್ರ ಅವರು ಅಕ್ಕಿ ಎಟಿಎಂಗೆ ಚಾಲನೆ ನೀಡಿದರು ಎನ್ನಲಾಗಿದೆ.

ಮಂಚೇಶ್ವರದಲ್ಲಿರುವ ಗೋದಾಮಿನಲ್ಲಿ ಅಕ್ಕಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯಲ್ಲಿ ಅಕ್ಕಿ ವಿತರಣೆಯನ್ನು ಸರಳೀಕರಿಸಲು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ.

ಅಕ್ಕಿ ಎಟಿಎಂ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಟಚ್‌ ಸ್ಕ್ರೀನ್ ನಲ್ಲಿ ನಮೂದಿಸಬೇಕು. ನಮೂದಿಸಿದಾಗ 25ಕೆಜಿವರೆಗೆ ಅಕ್ಕಿಯನ್ನು ವಿತರಿಸಲು ಅನುಮತಿ ಸಿಗುತ್ತದೆ. ಬಳಿಕ ಬಯೋಮೆಟ್ರಿಕ್ ದೃಢೀಕರಣವಿರಲಿದೆ. ಅಕ್ಕಿ ವಿತರಿಸುವ ಈ ಹೊಸ ತಂತ್ರಜ್ಞಾನದಿಂದಾಗಿ ಸಾರ್ವಜನಿಕರು ಅಕ್ಕಿಗಾಗಿ ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯುವ ಅಗತ್ಯವಿರುವುದಿಲ್ಲ ಎಂದು ವರದಿ ಪ್ರಕಟಿಸಲಾಗಿದೆ.

Also Read  ಮಕ್ಕಳಿಗೆ ಲೈಂಗಿಕ ಕಿರುಕುಳ ➤ ವಿರೋಧಿಸಿದ ತಾಯಿಯನ್ನೇ ಹತ್ಯೆಗೈದ ಪಾಪಿಗಳು..!

 

 

error: Content is protected !!
Scroll to Top