‘ಹರ್ ಘರ್ ತಿರಂಗಾ’ ಅಭಿಯಾನ            ಜನತೆಗೆ ಪ್ರಧಾನಿ ಮೋದಿ ಕರೆ         

(ನ್ಯೂಸ್ ಕಡಬ)newskadaba.com ನವದೆಹಲಿ, ಆ.09. ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸಾಮಾಜಿಕ ಜಾಲತಾಣ ಖಾತೆಗಳ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದು, ಮತ್ತೊಮ್ಮೆ ಹರ್ ಘರ್ ತಿರಂಗಾವನ್ನು ಸಾಮೂಹಿಕ ಅಭಿಯಾನವನ್ನಾಗಿ ಮಾಡೋಣ. ನಾನು ನನ್ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸುತ್ತಿದ್ದೇನೆ. ನೀವೂ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಡಿಪಿಗಳನ್ನು ಬದಲಾಯಿಸಿ ನನ್ನೊಂದಿಗೆ ಕೈಜೋಡಿಸಿ. ನಿಮ್ಮ ಸೆಲ್ಫಿಗಳನ್ನು https://hargartiranga.com ನಲ್ಲಿ ಹಂಚಿಕೊಳ್ಳಿ ಎಂದು ಹೇಳಿದ್ದಾರೆ.

Also Read  ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಮೇ.6ರಂದು ಚಂಡಮಾರುತ ಪರಿಚಲನೆ ಬೆಳೆಯುವ ಸಾಧ್ಯತೆಯಿದೆ..!​ ➤ ಹವಾಮಾನ ಇಲಾಖೆ ಸೂಚನೆ

 

error: Content is protected !!
Scroll to Top