ಕೇವಲ 2 ಅಂಕಗಳಿಂದ UPSC ಪರೀಕ್ಷೆಯಲ್ಲಿ ವಿಫಲ ಮುಂದೆ IAS ಆದ ಆದಿತ್ಯ

(ನ್ಯೂಸ್ ಕಡಬ) newskadaba.com ನವದೆಹಲಿ, ಆ.03. ಕಿಡಿಗೇಡಿಯಾಗಿದ್ದ ಹುಡುಗ ಈಗ ದೊಡ್ಡ ಅಧಿಕಾರಿಯಾಗಿರುವುದು ಹಳ್ಳಿಯ ಜನಕ್ಕೆ ನಂಬಲೂ ಅಸಾಧ್ಯವಾಗಿದೆ. ಮೊದಲು ಇಂಜಿನಿಯರ್ ಆದ ಆದಿತ್ಯ ನಂತರ ಎಂಬಿಎ ಪದವಿ ಪಡೆದರು. ಇದು ಅವರಿಗೆ ತೃಪ್ತಿ ನೀಡದಿದ್ದಾಗ, ಅವರು UPSC ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸಿದರು. ಅಂತಿಮವಾಗಿ IAS ಅಧಿಕಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.


12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ, ಆದಿತ್ಯ ಪಾಂಡೆ ಪಂಜಾಬ್ ನಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಬಿ.ಟೆಕ್ ಮಾಡಿದರು. ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು ಎನ್ನಲಾಗಿದೆ. ಅವರು 2020 ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಲು ಕೆಲಸವನ್ನು ತೊರೆದರು.

error: Content is protected !!
Scroll to Top