ಹರಿಯಾಣದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

(ನ್ಯೂಸ್ ಕಡಬ)newskadaba.com ಹರಿಯಾಣ, ಜು.25. ಹರಿಯಾಣದ ಫರೀದಾಬಾದ್ ಜಿಲ್ಲೆಯಲ್ಲಿ ಒಂದರ ಹಿಂದೊಂದರಂತೆ ಭೂಕಂಪನಗಳು ಸಂಭವಿಸಿದೆ. ದೆಹಲಿ-ಎನ್‌ಸಿಆರ್‌ನಾದ್ಯಂತ ಕಂಪನದ ಅನುಭವವಾಗಿದೆ ಎಂದು ವರದಿ ತಿಳಿಸಿದೆ.


ಫರಿದಾಬಾದ್ ಜಿಲ್ಲೆಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರದ ಕೇಂದ್ರದ ಮಾಹಿತಿಯ ಪ್ರಕಾರ, ಮೊದಲ ಕಂಪನವು ಬೆಳಗ್ಗೆ 10.54ಕ್ಕೆ ಸಂಭವಿಸಿದೆ, ಇದಾಗಿ 1 ಗಂಟೆಯೊಳಗೆ ಎರಡನೆಯ ಬಾರಿಗೆ 11.43ಕ್ಕೆ ಭೂಮಿ ಕಂಪಿಸಿದೆ.
ದೇಶದ ರಾಜಧಾನಿ ದೆಹಲಿ-ಎನ್‌ಸಿಆರ್‌ನ ಹಲವಾರು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Also Read  ಕಾಸರಗೋಡು: ಲಕ್ಷಾಂತರ ಮೌಲ್ಯದ ಮಾದಕ ವಸ್ತು ಸಾಗಾಟ    ➤ ಆರೋಪಿಗಳು ಅರೆಸ್ಟ್

error: Content is protected !!
Scroll to Top