ಬಜೆಟ್ ವಿರೋಧಿಸಿ ಸಂಸತ್ ನಲ್ಲಿ ಇಂದು INDIA ಮೈತ್ರಿಕೂಟ ಪ್ರತಿಭಟನೆ      

(ನ್ಯೂಸ್ ಕಡಬ)newskadaba.com ನವದೆಹಲಿ, ಜು.24.   ಕೇಂದ್ರ ಬಜೆಟ್ ವಿರೋಧಿಸಿ ಇಂದು ವಿಪಕ್ಷ INDIA ಮೈತ್ರಿಕೂಟ ಸಂಸತ್ ನಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ವರದಯಾಗಿದೆ. ಕೇಂದ್ರ ಬಜೆಟ್ ನ್ನು ವಿಪಕ್ಷಗಳು ತಾರತಮ್ಯದ ಬಜೆಟ್ ಎಂದು ಹೇಳಿವೆ. ಲೋಕಸಭೆಯಲ್ಲಿ INDIA ಮೈತ್ರಿಕೂಟವನ್ನು ಪ್ರತಿನಿಧಿಸುವ ನಾಯಕರು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಸಿದ್ದು, ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ‘ಈ ಬಾರಿಯ ಕೇಂದ್ರ ಬಜೆಟ್‌ನಿಂದ ಈಗಾಗಲೇ ಬಜೆಟ್‌ನ ಪರಿಕಲ್ಪನೆ ನಾಶವಾಗಿದೆ. ಬಹುತೇಕ ರಾಜ್ಯಗಳಿಗೆ ಸಂಪೂರ್ಣ ತಾರತಮ್ಯ ಎಸಗಿದೆ. ಹೀಗಾಗಿ ಇದನ್ನು ವಿರೋಧಿಸುವುದು ಹೇಗೆ ಎಂಬ ಬಗ್ಗೆ ಭಾರತ ಮೈತ್ರಿಕೂಟ ಸಭೆ ನಡೆಸಲಾಯಿತು ಎಂದು ಹೇಳಿದ್ದಾರೆ ಎನ್ನಲಾಗಿದೆ.

Also Read  ಸುಪ್ರೀಂ ಕೋರ್ಟ್‌ನ ಜಡ್ಜ್ ಆಗಿ ಜೊಯಮಲ್ಯ ಬಾಗ್ಚಿ ಅಧಿಕಾರ ಸ್ವೀಕಾರ

error: Content is protected !!
Scroll to Top