ಹಲ್ಲಿನ ಚಿಕಿತ್ಸೆಗೆಂದು ಬಂದ ಮಹಿಳೆಯ ತುಟಿಯನ್ನೇ ಕತ್ತರಿಸಿದ ವೈದ್ಯ

(ನ್ಯೂಸ್ ಕಡಬ) newskadaba.com ಹೈದರಾಬಾದ್‌ ಫೆ. 23: ಕೆಲ ದಿನಗಳ ಹಿಂದೆಯಷ್ಟೇ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿಯೊರ್ವನಿಗೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನೀಡಲಾಗಿದ್ದ ಅನಸ್ತೇಶಿಯ ಒವರ್​​ ಡೋಸ್​​ನಿಂದಾಗಿ ಸಾವನ್ನಪ್ಪಿರುವ ಸುದ್ದಿ ಎಲ್ಲೆಡೆ ವೈರಲ್​​ ಆಗಿತ್ತು.

ಇದೀಗಾ ಇದಕ್ಕೆ ಪೂರಕ ಎಂಬಂತೆ ಇದೇ ಡೆಂಟಲ್​​​ ಆಸ್ಪತ್ರೆಯಲ್ಲಿ ನಡೆದಿದ್ದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ವೈದ್ಯರೊಬ್ಬರು ಹಲ್ಲಿನ ಚಿಕಿತ್ಸೆಗೆಂದು ಬಂದ ಮಹಿಳೆಯ ತುಟಿಯನ್ನೇ ಕತ್ತರಿಸಿ ಕಳುಹಿಸಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಇದೀಗಾ @sowmya_sangam ಎಂಬ ಟ್ವಿಟರ್​​ ಬಳಕೆದಾರರು ಎಫ್‌ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ತನ್ನ ಗೆಳತಿಗಾದ ಅನ್ಯಾಯವನ್ನು ಪೋಸ್ಟ್​ ಮೂಲಕ ಹಂಚಿಕೊಂಡಿದ್ದಾರೆ. “ಇತ್ತೀಚೆಗಷ್ಟೇ ಅನಸ್ತೇಶಿಯ ಒವರ್​​ ಡೋಸ್​​ನಿಂದಾಗಿ ವ್ಯಕ್ತಿಯೊಬ್ಬ ಈ ಡೆಂಟಲ್​​ ಕ್ಲಿನಿಕ್​​​ನಲ್ಲಿ ಸಾವನ್ನಪ್ಪಿರುವ ಘಟನೆ ಅಘಾತವನ್ನುಂಟು ಮಾಡಿದೆ. ಆದರೆ ಇಲ್ಲಿನ ದಂತ ವೈದ್ಯರ ನಿರ್ಲಕ್ಷ್ಯಗಳು ಇದೇ ಮೊದಲೇನಲ್ಲಾ ಈ ಹಿಂದೆಯೂ ಕೂಡ ಇಂತದ್ದೇ ಘಟನೆ ನಡೆದಿದೆ. ತನ್ನ ಗೆಳತಿಯೊಬ್ಬರು ಇಲ್ಲಿ ಹಲ್ಲಿನ ಚಿಕಿತ್ಸೆಗೆಂದು ಹೋದಾಗ ಚಿಕಿತ್ಸೆಯ ಸಮಯದಲ್ಲಿ ಡೆಂಟಲ್​​​ ಬ್ಲೆಡ್​ನಿಂದ ಆಕೆಯ ತುಟಿಗಳನ್ನೇ ಕತ್ತರಿಸಿದ್ದಾರೆ” ಎಂದು ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

Also Read  ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ರಾಜೀನಾಮೆ ಅಂಗೀಕರಿಸಿದ ಭಾರತೀಯ ರೈಲ್ವೇ

ಈ ಪೋಸ್ಟ್​​​ ವೈರಲ್​​ ಆಗುತ್ತಿದ್ದು, ಸಾಕಷ್ಟು ನೆಟ್ಟಿಗರು ಕ್ಲಿನಿಕ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿಮಗಾದ ಅನ್ಯಾಯದ ವಿರುದ್ಧ ಆ ಡೆಂಟಲ್​ ಕ್ಲಿನಿಕ್​​ ವಿರುದ್ಧ ಕೋರ್ಟ್​​ನಲ್ಲಿ ಕೇಸು ದಾಖಲಿಸಿ” ಎಂದು ಸಾಕಷ್ಟು ನೆಟ್ಟಿಗರು ಬರೆದುಕೊಂಡಿದ್ದಾರೆ.

error: Content is protected !!
Scroll to Top