ದ್ವಿತೀಯ ಪಿಯು ಪರೀಕ್ಷೆ – ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 23. ಮಾರ್ಚ್ 01ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆ ಗುಡ್​ ನ್ಯೂಸ್​ ನೀಡಿದೆ. 2023-24ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್‌ 1 ರಿಂದ ಮಾರ್ಚ್‌ 22ರವರೆಗೆ ನಡೆಯಲಿದ್ದು, ಈ ಹಿನ್ನೆಲೆ ವಿದ್ಯಾಥಿಗಳ ಅನುಕೂಲಕ್ಕಾಗಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ವೋಲ್ವೋ ಎಸಿ ಬಸ್ ಹೊರತುಪಡಿಸಿ KSRTC ಹಾಗೂ BMTC ಬಸ್‍ ಗಳಲ್ಲಿ ಹಾಲ್ ಟಿಕೆಟ್ ತೋರಿಸಿ ಮನೆಯಿಂದ ಪರೀಕ್ಷಾ ಕೇಂದ್ರದವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

Also Read  ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ

error: Content is protected !!
Scroll to Top