ರೈಲ್ವೇ ಪ್ರಯಾಣಿಕರರು ಕುಳಿತಲ್ಲೇ ಆಹಾರವನ್ನು ಸೇವಿಸಲು ಹೀಗೆ ಮಾಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 23. ರೈಲ್ವೇ ಪ್ರಯಾಣಿಕರಿಗೆ ಕಾಡುತ್ತಿದ್ದ ಆಹಾರ ಸಮಸ್ಯೆಯನ್ನು ನಿವಾರಿಸಲು ಇದೀಗ IRCTC ಸಿಹಿ ಸುದ್ದಿಯೊಂದನ್ನು ನೀಡಿದೆ.

ಇದಕ್ಕಾಗಿ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಪ್ರಯಾಣಿಕರಿಗೆ ಮೊದಲೇ ಆರ್ಡರ್ ಮಾಡಿದ ಆಹಾರವನ್ನು ತಲುಪಿಸಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸ್ವಿಗ್ಗಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. IRCTCಯ ಈ ವಿಧಾನದಿಂದ ರೈಲ್ವೇ ಪ್ರಯಾಣಿಕರು ತಮ್ಮ ನೆಚ್ಚಿನ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಈ ಸೇವೆಗಳನ್ನು ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ನಾಲ್ಕು ರೈಲು ನಿಲ್ದಾಣಗಳಲ್ಲಿ ಪರಿಚಯಿಸಲಾಗುತ್ತಿದ್ದು, ಇದರ ಸಾಧಕ-ಬಾಧಕಗಳನ್ನು ಅರಿತ ನಂತರವೇ ಮುಂದಕ್ಕೆ ವಿಸ್ತರಿಸಲಾಗುವುದು ಎಂಬುವುದಾಗಿ ತಿಳಿದು ಬಂದಿದೆ. IRCTC ಪ್ರಕಾರ, ಆನ್ ಲೈನ್ ಫುಡ್ ಸರ್ವೀಸ್ ಸ್ವಿಗ್ಗಿಯ ಮಾತೃ ಸಂಸ್ಥೆಯಾದ ಬಂಡಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ರೈಲು ನಿಲ್ದಾಣಗಳಲ್ಲಿ ಮುಂಗಡ ಬುಕ್‌ ಮಾಡಿದ ಊಟಗಳ ವಿತರಣೆಯ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಮೊದಲ ಹಂತ ಪೂರ್ಣಗೊಂಡ ನಂತರ, ಈ ಸೇವೆಗಳನ್ನು ಆಯ್ದ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದೆ.

 

Also Read  ಮಾರಕಾಸ್ತ್ರಗಳಿಂದ ಕೊಚ್ಚಿ ದಲಿತ ಮುಖಂಡನ ಬರ್ಬರ ಹತ್ಯೆ ➤ ಅಪರಿಚಿತ ತಂಡದಿಂದ ಕೃತ್ಯ

ಆರ್ಡರ್ ಮಾಡುವ ವಿಧಾನ:- ಪ್ರಯಾಣಿಕರು ಮೊದಲನೆಯದಾಗಿ IRCTC ಇ-ಕ್ಯಾಟರಿಂಗ್ ಪೋರ್ಟಲ್ ಬಳಸಿ ಆಹಾರವನ್ನು ಆರ್ಡರ್ ಮಾಡಿ ತಮ್ಮ PNR ನಂಬರ್ ನ್ನು ಇ-ಕ್ಯಾಟರಿಂಗ್ ಪೋರ್ಟಲ್‌ನಲ್ಲಿ ನಮೂದಿಸಿ ಒಂದು ಔಟ್ಲೆಟ್ ಆಯ್ಕೆ ಮಾಡಿ ನಿಮ್ಮ ಆಯ್ಕೆಯ ಆಹಾರವನ್ನು ಆಯ್ಕೆ ಮಾಡುವ ಮೂಲಕ ಆರ್ಡರ್ ಅನ್ನು ಪೂರ್ಣಗೊಳಿಸಿ ಮತ್ತು ನಂತರ ಆನ್‌ಲೈನ್‌ ನಲ್ಲಿ ಪಾವತಿಸಿ ಅಥವಾ ಕ್ಯಾಶ್ ಆನ್ ಡಿಲೇವರಿ ನಿಗದಿಪಡಿಸಿ ನಿಮ್ಮ ಆಸನಕ್ಕೆ ಆಹಾರವನ್ನು ತಲುಪಿಸಲಾಗುತ್ತದೆ.

Also Read  ಪುಲ್ವಾಮಾ ದಾಳಿಗೆ ಇಂದಿಗೆ 5 ವರ್ಷ

error: Content is protected !!
Scroll to Top