ಉತ್ತರ ಪ್ರದೇಶ ಪೊಲೀಸ್ ಕಾನ್​ಸ್ಟೆಬಲ್ ನೌಕರಿಗೆ ಅರ್ಜಿ ಹಾಕಿದ ಸನ್ನಿ ಲಿಯೋನಿ

(ನ್ಯೂಸ್‌ ಕಡಬ)newskadaba.com ಉತ್ತರಪ್ರದೇಶ, ಫೆ.18: ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್‌ನ 60,244 ಹುದ್ದೆಗಳ ನೇಮಕಾತಿಗಾಗಿ ಎರಡು ದಿನಗಳಿಂದ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಗೆ 48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆ. ಮೊದಲ ದಿನ ಅಂದರೆ ಫೆಬ್ರವರಿ 17 ರಂದು ಹಲವು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಇದೀಗ ಕನ್ನೌಜ್ ಜಿಲ್ಲೆಯಲ್ಲಿ ಪತ್ತೆಯಾಗಿರುವ ಪ್ರವೇಶ ಪತ್ರ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರವೇಶ ಪತ್ರವನ್ನು ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ನೀಡಲಾಗಿದೆ. ಅದರಲ್ಲಿ ಸನ್ನಿಯ ಎರಡು ಫೋಟೋಗಳನ್ನು ಮುದ್ರಿಸಲಾಗಿದೆ. ಪ್ರವೇಶ ಪತ್ರದ ಪ್ರಕಾರ ಅಭ್ಯರ್ಥಿಯು ಉತ್ತರ ಪ್ರದೇಶದ ತಿರ್ವಾದಲ್ಲಿರುವ ಸೋನಶ್ರೀ ಸ್ಮಾರಕ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿತ್ತು. ವಿಚಾರ ಅಧಿಕಾರಿಗಳಿಗೆ ಗೊತ್ತಾಗುತ್ತಿದ್ದಂತೆಯೇ ಕೆಲ ಕಾಲ ಗೊಂದಲಕ್ಕೆ ಒಳಗಾದರು.

Also Read  ಬೀಟೆ ಮರ ಕಡಿದು ಮಾರಾಟ ಪ್ರಕರಣ  ➤ ಉಪ ಅರಣ್ಯಾಧಿಕಾರಿ ಸಸ್ಪೆಂಡ್..!

ಕೊನೆಗೆ ಸನ್ನಿ ಲಿಯೋನ್ ಹೆಸರಿನಲ್ಲಿ ನೀಡಿರುವ ಅಡ್ಮಿಟ್ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾರೋ ತಮಾಷೆಗಾಗಿ ಮಾಡಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಪ್ರಚಾರ ಮಂಡಳಿಯು ಇದು ನಕಲಿ ಪ್ರವೇಶ ಪತ್ರ ಎಂದು ತಿಳಿಸಿದೆ. ಸನ್ನಿ ಲಿಯೋನಿ ಹೆಸರಲ್ಲಿ ಅರ್ಜಿ ಸಲ್ಲಿಸಲಾಗಿದೆ ಅಷ್ಟೆ ಯಾರೂ ಸಹ ಆ ಪ್ರವೇಶ ಪತ್ರ ಬಳಸಿ ಪರೀಕ್ಷೆ ಬರೆದಿಲ್ಲ. ನಕಲಿ ಮಾಹಿತಿ ಬಳಸಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

error: Content is protected !!
Scroll to Top