ಕಡಬ: ಹೊಯಿಗೆಕೆರೆಯಲ್ಲಿ ಮೊಸಳೆ ಪತ್ತೆ..!

(ನ್ಯೂಸ್ ಕಡಬ) newskadaba.com ಕಡಬ, ಫೆ. 13. ಇಲ್ಲಿನ ಸಮೀಪದ ಅಡ್ಡಗದ್ದೆ ಎಂಬಲ್ಲಿನ ಹೊಯಿಗೆಕೆರೆಯಲ್ಲಿ ಮೊಸಳೆ ಇರುವುದು ಕಂಡುಬಂದಿದೆ.

ಫೆ. 12ರಂದು ಸ್ಥಳೀಯ ಯುವತಿಯೋರ್ವಳು ಕೆರೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೊಸಳೆ ಕಂಡುಬಂದಿದೆ ಎನ್ನಲಾಗಿದೆ. ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿರುವ ಸಮಯದಲ್ಲಿ ಮೊಸಳೆಗಳು ಕಾಣಸಿಗುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Scroll to Top