ವಿಮಾನ ಪತನ- ಪ್ರವಾಣಿ ತಾಣಕ್ಕೆ ತೆರಳಿದ್ದ 14 ಮಂದಿ ದುರ್ಮರಣ

(ನ್ಯೂಸ್ ಕಡಬ) newskadaba.com ಬ್ರೆಜಿಲ್, ಸೆ. 17. ವಿಮಾನ ಪತನವಾಗಿ ಇಬ್ಬರು ಸಿಬ್ಬಂದಿಗಳು ಸೇರಿದಂತೆ ಒಟ್ಟು 14 ಮಂದಿ ಮೃತಪಟ್ಟಿರುವ ಘಟನೆ ಬ್ರೆಜಿಲ್‌ನ ಉತ್ತರ ಅಮೆಜಾನ್ ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿ.ಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಸಂಭವಿಸಿದ ಕುರಿತು ಪತ್ರಿಕೆಯೊಂದು ವರದಿ ಮಾಡಿದೆ.


ರನ್‌ ವೇಯಿಂದ ಹೊರಟ ವಿಮಾನ ಮಳೆಯ ಕಾರಣದಿಂದ ಮಾರ್ಗ ಸರಿಯಾಗಿ ಗೋಚರಿಸದೇ ಇದ್ದಾಗ ಲ್ಯಾಂಡ್‌ ಆಗಲು ಪ್ರಯತ್ನಿಸಿದೆ. ಆದರೆ ಈ ವೇಳೆ ನಿಯಂತ್ರಣ ಕಳೆದುಕೊಂಡ ವಿಮಾನ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ. ವರದಿಯ ಪ್ರಕಾರ ವಿಮಾನದಲ್ಲಿದ್ದವರು ಮೀನುಗಾರಿಕೆಯ ಪ್ರವಾಸಿ ತಾಣವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬಾರ್ಸೆಲೋಸ್ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಇಲ್ಲಿ ಹಲವಾರು ರಾಷ್ಟ್ರೀಯ ಉದ್ಯಾನವನಗಳಿವೆ. ಈ ಕಾರಣದಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಅಲ್ಲಿಗೆ ತೆರಳುತ್ತಿದ್ದರು ಎಂದು ತಿಳಿಸಿದೆ.

Also Read  ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆ ಮುಂದೆ ಇಟ್ಟ ಪತಿರಾಯ

error: Content is protected !!
Scroll to Top