ನಿಷೇಧಿತ ಎಂಡಿಎಂಎ ಮಾರಾಟಕ್ಕೆ ಯತ್ನ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 17. ನಿಷೇಧಿತ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ತಲಪಾಡಿ ತಚ್ಚಾಣಿ ಬಳಿ ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತ ಆರೋಪಿಗಳನ್ನು ತ್ರಿಶ್ಶೂರ್‌ನ ವಡಕಂಚೇರಿ ಗ್ರಾಮದ ಶೇಕ್‌ ತನ್ವೀರ್‌ (20) ಹಾಗೂ ಕೋಝಿಕ್ಕೋಡ್‌ ಅಂಜೇರಿ ವಡಗೆರೆ ನಿವಾಸಿ ಸಾಯಿಕೃಷ್ಣ (19) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎಂಡಿಎಂಎ ಹಾಗೂ ಸಾಗಾಟಕ್ಕೆ ಬಳಸಿದ್ದ ಬೈಕ್‌ ಮತ್ತು ಮೊಬೈಲ್‌ಗ‌ಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಆನ್ವಯ ಪ್ರಕರಣ ದಾಖಲಾಗಿದೆ.

Scroll to Top