(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 15. ಬಳಕೆದಾರರಿಗೆ ತಿಳಿಸದೇ ಅವರ ಸ್ಥಳದ ಮಾಹಿತಿಯನ್ನು ಗೌಪ್ಯವಾಗಿ ಸಂಗ್ರಹಿಸುತ್ತಿರುವ ಆರೋಪದ ಹಿನ್ನೆಲೆ ಇದೀಗ ಗೂಗಲ್ ಸಂಸ್ಥೆಯು 7000 ಕೋಟಿ ರೂ. ದಂಡ ಪಾವತಿಸಬೇಕಾಗಿದೆ ಎಂದು ವರದಿಯೊಂದು ತಿಳಿಸಿದೆ.
ಬಳಕೆದಾರರು ಲೊಕೇಷನ್ ಹಿಸ್ಟರಿ ಆಫ್ ಮಾಡಿದ್ದರೂ ಅವರು ಇರುವ ಸ್ಥಳದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗೂಗಲ್ ತನ್ನ ಬಳಕೆದಾರರ ಗಮನಕ್ಕೆ ತಾರದೇ ಅವರ ವಿವಿಧ ಮಾಹಿತಿಗಳನ್ನು ಗೌಪ್ಯವಾಗಿ ಸಂಗ್ರಹಿಸುತ್ತಿದೆ. ಇದರಿಂದ ಗೂಗಲ್ ಬಳಕೆದಾರರಿಗೆ ಅಪಾಯ ಎದುರಾಗಬಹುದು. ಖಾಸಗಿತನಕ್ಕೆ ಇದು ಧಕ್ಕೆ ಆಗುತ್ತಿದೆ ಎಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿದೆ. ಈ ಕುರಿತು ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪ ಸಾಬೀತಾದಲ್ಲಿ ಗೂಗಲ್ 93 ದಶಲಕ್ಷ ಡಾಲರ್ ಅಂದರೆ ಸುಮಾರು 7000 ಕೋಟಿ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.