ಸೂರ್ಯನತ್ತ ಇಸ್ರೋ ಹೆಜ್ಜೆ….!! – ಆದಿತ್ಯ L1 ಉಡಾವಣೆ ಗೆ ಕ್ಷಣಗಣನೆ ಆರಂಭ

(ನ್ಯೂಸ್ ಕಡಬ)newskadaba.com ನವದೆಹಲಿ, ಸೆ.02. ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ, ದೇಶವು ಮತ್ತೊಂದು ಮಹತ್ತರ ಸಾಧನೆಗೆ ಸಜ್ಜಾಗುತ್ತಿದ್ದು, ಈ ಬಾರಿ ಇಸ್ರೋ ಸೂರ್ಯನಿತ್ತ ದೃಷ್ಟಿ ಇಟ್ಟಿದೆ ಎನ್ನಲಾಗಿದೆ. ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ – ಎಲ್ 1 ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಮಿಷನ್ ಇಂದು ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಲಾಂಚ್ ಆಗಲಿದೆ.


ಈ ಪ್ರಯೋಗದ ಹಿನ್ನೆಲೆಯಲ್ಲಿ ಆದಿತ್ಯ ಎಲ್1 ಆಕೃತಿ ಹೊತ್ತ ಇಸ್ರೋ ವಿಜ್ಞಾನಿಗಳ ತಂಡ ತಿರುಮಲ ತಿಮ್ಮಪ್ಪನನ್ನು ಭೇಟಿ ಮಾಡಿ ಸೂಳ್ಳೂರುಪೇಟೆಯ ಚೆಂಗಲಮ್ಮ ಪರಮೇಶ್ವರಿ ಸನ್ನಿಧಿಯಲ್ಲೂ ವಿಶೇಷ ಪೂಜೆ ನಡೆಸಿದೆ. ಈ ಬಾಹ್ಯಾಕಾಶ ನೌಕೆಯನ್ನು PSLV-C57 ನಿಂದ ಉಡಾವಣೆ ಮಾಡಲಾಗುವುದು.

Also Read  ಮಂಗಳೂರು :ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದ ಪತಿ.!

ಆದಿತ್ಯ L1 ಅನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top