ತೆರೆದ ಚರಂಡಿಗೆ ಬಿದ್ದು ಎರಡು ವರ್ಷದ ಮಗು ದಾರುಣ ಮೃತ್ಯು



(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 25. ಮನೆಯ ಎದುರಿಗಿದ್ದ ತೆರೆದ ಚರಂಡಿಗೆ ಬಿದ್ದು ಎರಡು ವರ್ಷದ ಮಗುವೊಂದು ಪ್ರಾಣ ಕಳೆದುಕೊಂಡ ದಾರುಣ ಘಟನೆ ಕಲಬುರಗಿ ನಗರದ ಮುಜಾಹಿರ್ ಬಡಾವಣೆಯಲ್ಲಿ ನಡೆದಿದೆ.








ಮೃತ ಮಗುವನ್ನು ಸೋನಿಯಾ ಗಾಂಧಿ ಆಶ್ರಯ ಕಾಲನಿಯ ಮಹಮ್ಮದ್ ಬುರ್‌ಹಾನುದ್ದೀನ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ (2) ಎಂದು ಗುರುತಿಸಲಾಗಿದೆ. ಗುರುವಾರದಂದು ಮಧ್ಯಾಹ್ನ ಮಗು ಆಟ ಆಡಿಕೊಂಡು ಮನೆಯ ಮುಂಭಾಗದಲ್ಲಿನ ಒಳಚರಂಡಿ ಕಡೆಗೆ ಹೋಗಿದ್ದು, ಈ ವೇಳೆ ತಿಳಿಯದೇ ಚರಂಡಿಯಲ್ಲಿ ಬಿದ್ದು, ಉಸಿರುಗಟ್ಟಿ ಕೊನೆಯುಸಿರಳೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top