ಕಡಬ: ಅನಾರೋಗ್ಯದಿಂದ ಯುವಕ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಆ. 15. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ಗ್ರಾಮದ ಪಿಜಕ್ಕಳ ಎಂಬಲ್ಲಿಂದ ವರದಿಯಾಗಿದೆ.

ಮೃತರನ್ನು ಕಡಬ ತಾಲೂಕಿನ ಪಿಜಕ್ಕಳ ಪೊಯ್ಯೆತ್ತಡ್ಡ ನಿವಾಸಿ ಸುಂದರ ಗೌಡರವರ ಪುತ್ರ ರಾಜೇಶ್ (30) ಎಂದು ಗುರುತಿಸಲಾಗಿದೆ.


ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರಾಜೇಶ್, ಅಲ್ಲಿಯೇ ಅನಾರೋಗ್ಯಕ್ಕೆ ಒಳಗಾಗಿದ್ದರು. ಮನೆಯವರು ಅಲ್ಲಿಂದ ಕರೆತಂದು ಆ.13ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಆ.14ರಂದು ಸಂಜೆ ನಿಧನರಾಗಿದ್ದಾರೆ ಎನ್ನಲಾಗಿದೆ. ಮೃತರು ತಂದೆ ಸುಂದರ ಗೌಡ, ಸಹೋದರ ಯಕ್ಷಗಾನ ಕಲಾವಿದ ಯೋಗೀಶ್ ಅವರನ್ನು ಅಗಲಿದ್ದಾರೆ.

Scroll to Top