ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಳವಾದ ಮೊಬೈಲ್‌ಫೋನ್ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ – News Kadaba

ಕಳವಾದ ಮೊಬೈಲ್‌ಫೋನ್ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಪ್ರತಿನಿತ್ಯವೂ ಎಲ್ಲ ಕಡೆ ಹಲವು ಮೊಬೈಲ್‌ ಫೋನ್‌ ಗಳು ಕಳವಾಗುತ್ತವೆ. ಅವುಗಳಲ್ಲಿ ಕೆಲವು ಪತ್ತೆಯಾದರೆ ಇನ್ನು ಕೆಲವು ಸಿಗುವುದೇ ಇಲ್ಲ. ಪೊಲೀಸರು ಒಂದಷ್ಟು ಮೊಬೈಲ್‌ ಫೋನ್‌ ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಾರಸುದಾರರಿಗೆ ಒಪ್ಪಿಸುತ್ತಿರುತ್ತಾರೆ. ಆ ಪೈಕಿ ಈಗ ಕರ್ನಾಟಕ ಪೊಲೀಸರು ಮೊದಲ ಸ್ಥಾನದಲ್ಲಿದ್ದಾರೆ.

ಕಳವಾದ ಇಲ್ಲವೇ ಕಾಣೆಯಾದ ಪೈಕಿ ಅತಿಹೆಚ್ಚು ಮೊಬೈಲ್‌ ಫೋನ್‌ ಗಳನ್ನು ಕರ್ನಾಟಕ ಪೊಲೀಸರು ಪತ್ತೆ ಮಾಡಿ ಅವುಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಸಿಇಐಆರ್ ಪೋರ್ಟಲ್ ಮೂಲಕ ಕಾರ್ಯಾಚರಣೆ ನಡೆಸಿ ಅವರು ಈ ಮೊಬೈಲ್‌ ಫೋನ್‌ ಗಳನ್ನು ಪತ್ತೆ ಹಚ್ಚಿದ್ದರು.

ಕಳವಾದ ಮೊಬೈಲ್‌ ಫೋನ್‌ಗಳನ್ನು ಪತ್ತೆ ಮಾಡಲೆಂದೇ ಕೇಂದ್ರ ದೂರಸಂಪರ್ಕ ಇಲಾಖೆ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಎಂಬ ಈ ಪೋರ್ಟಲ್ ಆರಂಭಿಸಿದೆ. ಕರ್ನಾಟಕ ಪೊಲೀಸರು ಕಳವಾದ ಇಲ್ಲವೇ ಕಾಣೆಯಾದ 16,232 ಮೊಬೈಲ್​ಫೋನ್​ಗಳನ್ನು ಈ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಅವುಗಳಲ್ಲಿ 8,878 ಫೋನ್​​ಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.

 

Scroll to Top