ಅಕ್ರಮ ಮರಳುಗಾರಿಕೆ- 10 ಲೋಡ್ ಮರಳು ವಶಕ್ಕೆ



(ನ್ಯೂಸ್ ಕಡಬ) newskadaba.com ಉಳ್ಳಾಲ, . 05. ಅಕ್ರಮವಾಗಿ ಮರಳು ದಾಸ್ತಾನಿರಿಸಲಾಗಿದ್ದ ಸ್ಥಳಕ್ಕೆ ದಾಳಿ ನಡೆಸಿದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸರ ತಂಡವು 10 ಲೋಡ್ ಮರಳು ವಶಕ್ಕೆ ಪಡೆದುಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಡಿ ಸಮೀಪ ನಡೆದಿದೆ.







ಅಕ್ರಮ ಮರಳು ದಾಸ್ತಾನು ಇರಿಸಿದ ಆರೋಪದಡಿಯಲ್ಲಿ ಕೋಡಿ ನಿವಾಸಿಗಳಾದ ಉಮ್ಮರ್, ನೌಫಾಲ್, ಹನೀಫ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ತಡರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top