(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಜು. 31. ಶ್ರೀಲಂಕಾ ಮೂಲದ 25 ವರ್ಷದ ಯುವತಿಯೊಬ್ಬಳು ಫೇಸ್ ಬುಕ್ ಗೆಳೆಯನನ್ನು ಮದುವೆಯಾಗಲು ಆಂಧ್ರ ಪ್ರದೇಶಕ್ಕೆ ಬಂದಿರುವ ಕುರಿತು ವರದಿಯಾಗಿದೆ.
ಲಕ್ಷ್ಮಣ್(28) ಎನ್ನುವ ಯುವಕನಿಗೆ 2017 ರಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾಗಿ ಸ್ನೇಹಿತರಾದ ಇವರು, ಆ ಬಳಿಕ ಆತ್ಮೀಯರಾಗಿದ್ದು, ಇವರ ಆತ್ಮೀಯತೆ ಪ್ರೀತಿಗೆ ತಿರುಗಿತು ಎನ್ನಲಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಇವರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಯುವತಿಯು ಶ್ರೀಲಂಕಾದಿಂದ ಆಂಧ್ರಕ್ಕೆ ಪ್ರವಾಸಿ ವೀಸಾದೊಂದಿಗೆ ಬಂದಿದ್ದು, ಇಬ್ಬರ ನಡುವಿನ ಪ್ರೀತಿಯ ವಿಚಾರ ಲಕ್ಷ್ಮಣ್ ಅವರ ಕುಟುಂಬಕ್ಕೆ ಮೊದಲೇ ತಿಳಿದಿತ್ತು. ಲಕ್ಷ್ಮಣ್ ಅವರ ಕುಟುಂಬದವರ ಸಮ್ಮುಖದಲ್ಲಿ ದೇವಸ್ಥಾನವೊಂದರಲ್ಲಿ ಇಬ್ಬರು ಮದುವೆಯಾಗಿದ್ದಾರೆ.