ವಿವಾಹಿತ ಮಹಿಳೆ ಪಕ್ಕದ ಮನೆಯ ಯುವತಿಯೊಂದಿಗೆ ನಾಪತ್ತೆ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಜು. 29. ವಿವಾಹಿತ ಮಹಿಳೆಯೊಬ್ಬಳು ಪಕ್ಕದ ಮನೆ ಯುವತಿಯೊಂದಿಗೆ ಓಡಿ ಹೋಗಿರುವ ವಿಚಿತ್ರ ಪ್ರಕರಣ ಉತ್ತರಪ್ರದೇಶದಿಂದ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಇಬ್ಬರ ನಡುವೆ ಮೊಬೈಲ್ ಫೋನ್‌ ಮೂಲಕ ದಿನಂಪ್ರತಿ ಕನಿಷ್ಠ ಏಳರಿಂದ ಎಂಟು ಗಂಟೆಗಳವರೆಗೆ ಫೋನ್ ಮೂಲಕ ಸಂಭಾಷಣೆ ನಡೆಯುತ್ತಿತ್ತು. ಈ ನಡುವೆ, ಪಕ್ಕದ ಮನೆಯ ಯುವತಿ ಮತ್ತು ವಿವಾಹಿತ ಮಹಿಳೆ ಇದ್ದಕಿದ್ದಂತೆ ನಾಪತ್ತೆ ಆಗಿ ಬಿಟ್ಟಿದ್ದಾರೆ ಎನ್ನಲಾಗಿದೆ. ಪತಿಯೊಂದಿಗೆ ಮಾರುಕಟ್ಟೆಗೆ ತೆರಳಿದ್ದ ವಿವಾಹಿತ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿದ್ದರಿಂದ ಚಿಂತಿತನಾದ ಪತಿ, ಪತ್ನಿ ಕಾಣೆಯಾಗಿರುವ ಕುರಿತಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ವಿವಾಹಿತ ಮಹಿಳೆಯ ಮೊಬೈಲ್ ಫೋನ್‌ನ ಕರೆ ವಿವರಗಳನ್ನು ಪರಿಶೀಲಿಸಿದಾಗ ಮಹಿಳೆ ಮತ್ತು ನೆರೆಯ ಹುಡುಗಿಯ ನಡುವಿನ ಪ್ರೇಮ ಪ್ರಕರಣ ಬಯಲಾಗಿದೆ. ವಿವಾಹಿತ ಮಹಿಳೆ ಮತ್ತು ಹುಡುಗಿಯ ಪತ್ತೆ ಕಾರ್ಯ ನಡೆದು ಇವರಿಬ್ಬರೂ ಕೂಡ ದೆಹಲಿಯಲ್ಲಿರುವ ಮಾಹಿತಿ ಕಲೆ ಹಾಕಿದ್ದಾರೆ. ಪೊಲೀಸರ ಪ್ರಕಾರ, ಇವರಿಬ್ಬರ ನಡುವೆ ಸ್ನೇಹ ಅದೆಷ್ಟು ಗಟ್ಟಿಯಾಗಿತ್ತು ಎಂದರೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸುವ ಮಟ್ಟಿಗೆ ಸಂಬಂಧ ಗಟ್ಟಿಯಾಗಿತ್ತು ಎಂದಿದ್ದಾರೆ.

Also Read  ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಬಾಲಕರಿಬ್ಬರು ಮೃತ್ಯು

ಈ ವೇಳೆ ವಿವಾಹಿತ ಮಹಿಳೆ ಮತ್ತು ಯುವತಿ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಮನೆ ಬಿಟ್ಟಿರುವ ವಿಚಾರ ತಿಳಿಸಿದ್ದು, ವಿವಾಹಿತ ಮಹಿಳೆ ಮತ್ತು ಯುವತಿ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ತಮ್ಮ ತಪ್ಪಿನಿಂದ ಕುಟುಂಬಗಳಿಗೆ ಉಂಟಾದ ನೋವನ್ನು ಗಮನಿಸಿ ತಮ್ಮ ನಡೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

Also Read  ಟ್ರೆಕ್ಕಿಂಗ್  ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ.!

 

error: Content is protected !!
Scroll to Top