ಹಿಮಾಲಯದ ಮೇಲೆ ಪುರಾತನ ಸಮುದ್ರ ಸಂಶೋಧಿಸಿದ ವಿಜ್ಞಾನಿಗಳು

(ನ್ಯೂಸ್ ಕಡಬ)newskadaba.com ನವದೆಹಲಿ, ಜು.29. ಜಪಾನ್​ನ ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಮತ್ತು ನಿಗಾಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಿಮಾಲಯದಲ್ಲಿ ಪ್ರಾಚೀನ ಸಮುದ್ರದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. 700 ರಿಂದ 500 ದಶಲಕ್ಷ ವರ್ಷಗಳ ಹಿಂದೆ, ಭೂಮಿಯು ಹಿಮದ ಉಂಡೆಯ ರೀತಿ ಇದ್ದು ದೀರ್ಘಕಾಲದ ಹಿಮಯುಗಕ್ಕೆ ಒಳಗಾಯಿತು ಎಂದು ವಿಜ್ಞಾನಿಗಳು ಸಿದ್ಧಾಂತ ವ್ಯಕ್ತಪಡಿಸಿದ್ದಾರೆ.

ಖನಿಜ ನಿಕ್ಷೇಪಗಳಲ್ಲಿ ಸಿಕ್ಕಿಬಿದ್ದ ನೀರಿನ ಹನಿಗಳನ್ನು ತಂಡವು ಕಂಡುಹಿಡಿದಿದ್ದು ಸಂಶೋಧನೆ, ಭೂಮಿಯಲ್ಲಿ ಹಿಂದೆ ನಡೆದ ಮಹತ್ವದ ಆಮ್ಲಜನಕೀಕರಣ ಹಾಗೂ ಜೀವದ ಅಭಿವೃದ್ಧಿಯ ಘಟನೆಯ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬೊನೇಟ್​ಗಳಿಂದ ಸಮೃದ್ಧವಾಗಿರುವ ಈ ಖನಿಜ ನಿಕ್ಷೇಪಗಳು ‘ಪ್ಯಾಲಿಯೊ ಸಾಗರ’ದ ಪಳೆಯುಳಿಕೆಗಳಿಗೆ ಹೋಲುತ್ತವೆ ಎಂದು ಬಹಿರಂಗಪಡಿಸುತ್ತದೆ. ಈ ಕುರಿತಾಗಿ ಸೆಂಟರ್ ಫಾರ್ ಅರ್ಥ್ ಸೈನ್ಸಸ್ ( CEaS ), IISc ಮತ್ತು ಅಧ್ಯಯನದ ಪ್ರಮುಖ ಲೇಖಕ ಪಿಎಚ್​ಡಿ ಪ್ರಕಾಶ್ ಚಂದ್ರ ಆರ್ಯ ಮಾಹಿತಿ ನೀಡಿದ್ದಾರೆ.

Also Read  ಮಂಗಳೂರು: ಕರಾವಳಿ ಭದ್ರತೆ ಹೆಚ್ಚಿಸಲು ಇನ್ನೆರಡು ರಾಡಾರ್‌ ಸ್ಥಾಪನೆ..! ➤  ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ

 

error: Content is protected !!
Scroll to Top