ಸೇನಾ ಹೆಲಿಕಾಪ್ಟರ್ ಪತನ – ನಾಲ್ವರು ಸಿಬ್ಬಂದಿಗಳು ನಾಪತ್ತೆ !!

(ನ್ಯೂಸ್ ಕಡಬ)newskadaba.com ಆಸ್ಟ್ರೇಲಿಯಾ, ಜು.29. ಸೇನಾ ಹೆಲಿಕಾಪ್ಟರ್ ಪತನವಾಗಿ ನಾಲ್ವರು ಅದೃಶ್ಯವಾಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ.


ಆಸ್ಟ್ರೇಲಿಯಾದ ಈಶಾನ್ಯ ಕರಾವಳಿಯಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದಾಗ ಸೇನಾ ಹೆಲಿಕಾಪ್ಟರ್ ನೀರಿನಲ್ಲಿ ಮುಳುಗಿದ್ದು, ನಾಲ್ವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಹೇಳಿದ್ದಾರೆ.
ಸೇನಾ ಅಭ್ಯಾಸ ನಡೆಸುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿದ್ದು, ನಾಲ್ವರು ಏರ್ ಸಿಬ್ಬಂದಿ ಕಾಣೆಯಾಗಿದ್ದಾರೆ. ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ನಡೆಯುತ್ತಿದ್ದು, ಕಾಣೆಯಾದವರಿಗಾಗಿ ಶೋಧ ನಡೆಯುತ್ತಿದೆ.

Also Read  30 ನಿಮಿಷದೊಳಗೆ ಪ್ರಯಾಣಿಕರಿಗೆ ಲಗೇಜು ತಲುಪಿಸಿ: ಬಿಸಿಎಎಸ್‌

error: Content is protected !!
Scroll to Top