100 ರೂಪಾಯಿಗಾಗಿ ಮಗನನ್ನೇ ಕುಡಿದ ಮತ್ತಿನಲ್ಲಿ ಕೊಂದ ಪಾಪಿ ತಂದೆ

(ನ್ಯೂಸ್ ಕಡಬ)newskadaba.com ಸಮಸ್ತಿಪುರ, ಜು.27. ಕುಡಿದ ಅಮಲಿನಲ್ಲಿ ತಂದೆಯೊಬ್ಬ ತನ್ನ ಅಮಾಯಕ ಮಗನನ್ನೇ ಕತ್ತು ಸೀಳಿ ಕೊಂದಿದ್ದಾನೆ. ಬಿಹಾರದ ಸಮಸ್ತಿಪುರ ಜಿಲ್ಲೆಯಿಂದ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮೊಹಿಯುದ್ದೀನ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾದಯ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಭದಯ್ಯ ಗ್ರಾಮದಲ್ಲಿ ತಂದೆ ತನ್ನ ಮೂರು ವರ್ಷದ ಅಮಾಯಕ ಮಗನ ಕುತ್ತಿಗೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಗಲಾಟೆ ನಡೆದ ನಂತರ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ದುರಾದೃಷ್ಠವಶಾತ್​ ಚಿಕಿತ್ಸೆ ವೇಳೆ ಮಗು ಮೃತಪಟ್ಟಿದೆ.

Also Read  ಅಬುಧಾಬಿಯಲ್ಲಿ ಬರೊಬ್ಬರಿ 44 ಕೋಟಿ ಲಾಟರಿ ಗೆದ್ದ ವ್ಯಕ್ತಿ

 

error: Content is protected !!
Scroll to Top