ವಸತಿ ನಿಲಯದ 19 ವಿದ್ಯಾರ್ಥಿಗಳು ಅಸ್ವಸ್ತ – ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಕಾಸರಗೋಡು, ಜು.27. ವಸತಿ ನಿಲಯದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ನೀಲೇಶ್ವರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸತತ ಕೆಮ್ಮು ಕಂಡು ಬಂದುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಭೇಟಿಯಾದ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಅವರು ಯೋಗ ಕ್ಷೇಮ ವಿಚಾರಿಸಿದರು ಎನ್ನಲಾಗಿದೆ.

error: Content is protected !!
Scroll to Top