ಮಲಗಿದ್ದ ಮಗುವಿನ ಬಾಯೊಳಗೆ ಹೋದ ಹಲ್ಲಿ – ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಕೋಬ್ರಾ, ಜು.26. ಮನೆಯಲ್ಲಿ ಹಲ್ಲಿಗಳು ಕಾಣುವುದು ಸಾಮಾನ್ಯ. ಆದರೆ ಈ ಹಲ್ಲಿ ಯಾರನ್ನಾದರೂ ಕೊಲ್ಲುತ್ತದೆ ಎಂದರೆ ನಂಬಲೂ ಸಹ ವಿಚಿತ್ರ ಎನಿಸುತ್ತದೆ. ಇಂತಹ ಘಟನೆಯೊಂದು ಛತ್ತೀಸ್‌ಗಢದ ಕೋಬ್ರಾದಲ್ಲಿ ನಡೆದಿದ್ದು, ಮಗುವಿನ ಬಾಯಿಗೆ ಹಲ್ಲಿ ನುಗ್ಗಿ 3 ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ.


ರಾಜ್‌ ಕುಮಾರ್ ಚಂಡೆ ಎಂಬುವರ ಕುಟುಂಬವು ನಾಗಿನಬಂಡಾ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರ ಮೂರನೇ ಮಗ ಜಗದೀಶ್ನೇ ಮೃತ ದುರ್ದೈವಿಯಾಗಿದ್ದಾನೆ. ಘಟನೆಯ ವೇಳೆ ಎರಡೂವರೆ ವರ್ಷದ ಜಗದೀಶ್ ಮಲಗಿದ್ದ ಎನ್ನಲಾಗಿದ್ದು, ಈ ವೇಳೆ ಆತನ ತಾಯಿ ಮನೆಗೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ನಂತರ ಮಲಗಿದ್ದ ಜಗದೀಶ ಮಗನನ್ನು ನೋಡಿದಾಗ ಆತ ನಿಶ್ಚಲನಾಗಿ ಬಿದ್ದಿದ್ದ ಎನ್ನಲಾಗಿದೆ.

Also Read  ಸುಳ್ಯ: ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೀಣಾ ಎಂ.ಟಿ. ನಿಯೋಜನೆ   

ಕೂಡಲೇ ಅನುಮಾನಗೊಂಡ ತಾಯಿಯು ಬಾಲಕನ ಹತ್ತಿರ ಬಂದಾಗ ಆತನ ಬಾಯಲ್ಲಿ ಹಲ್ಲಿ ಸತ್ತು ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದು ಕೂಡಲೇ ಅಕ್ಕಪಕ್ಕದವರಿಗೆ ತಿಳಿಸಿದ್ದಾಳೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

 

error: Content is protected !!
Scroll to Top