‘ಥ್ರೆಡ್ಸ್’ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜು. 25. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಫ್ಯಾನ್ ಬಳಗ ತುಂಬಾ ದೊಡ್ಡದು. ದಕ್ಷಿಣದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಸ್ಟೈಲಿಸ್ಟ್ ಸ್ಟಾರ್ ಅವರ ಸಿನಿಮಾಗಳನ್ನು ನೋಡುವವರಿದ್ದಾರೆ. ಅಲ್ಲು ಅರ್ಜುನ್ ಅವರ ಅನೇಕ ಸಿನಿಮಾಗಳು ಹಿಂದಿ ಸೇರಿದಂತೆ ಇತರ ಭಾಷೆಗೆ ಆಗಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿವೆ. ಹಾಗಾಗಿ ಅವರಿಗೆ ಅಭಿಮಾನಿಗಳು ಎಲ್ಲಾ ಕಡೆ ಇದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ಅಲ್ಲು ಅರ್ಜುನ್ ಇತ್ತೀಚೆಗೆ ಬಂದ ಮೆಟಾ ಒಡೆತನದ ಥ್ರೆಡ್ಸ್ ನಲ್ಲಿ ಹೊಸ ದಾಖಲೆ ಬರೆದು ಸುದ್ದಿಯಾಗಿದ್ದಾರೆ. ಟ್ವಿಟ್ಟರ್, ಇನ್ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇದೇ ವರ್ಷ ಇನ್ಸ್ಟಾಗ್ರಾಂ ನಲ್ಲಿ 20 ಸಾವಿರ ಹಿಂಬಾಲಕರನ್ನು ದಾಟಿ ದಕ್ಷಿಣ ಭಾರತದ ಮೊದಲ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಮತ್ತೊಮ್ಮೆ ಮೆಟಾ ಒಡೆತನದ ಥ್ರೆಡ್ಸ್ ನಲ್ಲಿ 1 ಮಿಲಿಯನ್ ಗೂ ಅಧಿಕ ಹಿಂಬಾಲಕರನ್ನು ಹೊಂದಿ, ಭಾರತದ ಮೊದಲ ಸೆಲೆಬ್ರಿಟಿಯಾಗಿದ್ದಾರೆ.

Also Read  ಮಂಗಳೂರು : ಜೈಲಿನ ಮೇಲೆ ಪೊಲೀಸರ ದಾಳಿ ! 25 ಮೊಬೈಲ್,ಡ್ರಗ್ಸ್ ಸೇರಿ ಹಲವು ಸೊತ್ತು ವಶಕ್ಕೆ

error: Content is protected !!
Scroll to Top