ಮಳೆಗೆ ಧ್ವಂಸಗೊಂಡ ಮನೆ – ಅದೃಷ್ಟವಶಾತ್ ಯಜಮಾನಿ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com  ಬೆಟ್ಟಂಪಾಡಿ, ಜು.25. ನಿರಂತರ ಸುರಿಯುತ್ತಿರುವ ಮಳೆಗೆ ಇಲ್ಲಿನ ಇರ್ದೆ ಅರಂಬ್ಯ ಸುಶೀಲ ಎಂಬವರ ಮನೆ ಬಿದ್ದು ಸಂಪೂರ್ಣ ಧ್ವಂಸಗೊಂಡಿರುವ ಘಟನೆ ಸಂಭವಿಸಿದೆ. ಹಂಚಿನ ಛಾವಣಿ ಸಂಪೂರ್ಣ ಕುಸಿದು, ಇಟ್ಟಿಗೆ ಗೋಡೆ ಹಾನಿಗೊಳಗಾಗಿದೆ.

ಮನೆ ಬೀಳುವ ವೇಳೆಗೆ ಸುಶೀಲರವರು ಮಗಳ ಹೋಗಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬೆಟ್ಟಂಪಾಡಿ ಪಂಚಾಯತ್ ಪಿಡಿಒ ಸೌಮ್ಯ, ಸಿಬ್ಬಂದಿ ಸಂದೀಪ್. ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

Scroll to Top