ಕಟ್ಟಿಗೆಗಾಗಿ ಗುಡ್ಡೆಗೆ ಹೋದ ವ್ಯಕ್ತಿ ಹೆಜ್ಜೇನು ಕಡಿದು ಮೃತ್ಯು

(ನ್ಯೂಸ್ ಕಡಬ)newskadaba.com  ಪುತ್ತೂರು, ಜು.25. ಕಟ್ಟಿಗೆಗಾಗಿ ಮನೆಯ ಪಕ್ಕದ ಗುಡ್ಡೆಗೆ ಹೋಗಿದ್ದ ವೇಳೆ ಹೇಜ್ಜೇನು ಕಡಿದು ಗಂಭೀರ ಗಾಯಗೊಂಡಿದ್ದ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೇ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಗುರುವ(55) ಎಂದು ಗುರುತಿಸಲಾಗಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top