ಗೃಹರಕ್ಷಕ ಹೂವಪ್ಪರಿಗೆ ಸಾಂತ್ವನ ಹೇಳಿದ ಸಮಾದೇಷ್ಟ ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು. 25. ಕಳೆದ ಆರು ತಿಂಗಳಿಂದ ನರ ಸಂಬಂಧಿ ಕಾಯಿಲೆಗಳಿಂದ  ಬಳಲುತ್ತಿರುವ ಮುಖ್ಯಮಂತ್ರಿ ಗಳ ಚಿನ್ನದ ಪದಕ ಪುರಸ್ಕೃತ ಬೆಳ್ಳಾರೆ ಘಟಕದ ಗೃಹರಕ್ಷಕ ಶ್ರೀ ಹೂವಪ್ಪ ಅವರನ್ನು ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ|ಮುರಲಿ ಮೋಹನ್ ಚೂಂತಾರು ಅವರು, ಮನೆಗೆ ಭೇಟಿ ನೀಡಿ ಸಾಂತ್ವನ ನುಡಿದರು.

ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಘಟಕದ ಘಟಕಾಧಿಕಾರಿ ಶ್ರೀ ವಸಂತ್ ಕುಮಾರ್ ಅವರು ಉಪಸ್ಥಿತರಿದ್ದರು.

Scroll to Top