ರೇಬಿಸ್‌ನಿಂದ ಸಾವಿನ ಪ್ರಮಾಣದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ !

(ನ್ಯೂಸ್ ಕಡಬ)newskadaba.com ನವದೆಹಲಿ, ಜು.24. ದೇಶಾದ್ಯಂತ 2022ರಲ್ಲಿ ಸಂಭವಿಸಿದ ರೇಬಿಸ್ ಸೋಂಕಿನಿಂದಾದ ಮರಣ ಪ್ರಮಾಣದಲ್ಲಿ ಕರ್ನಾಟಕ ರಾಜ್ಯಗಳು ಮೂರನೆ ಸ್ಥಾನದಲ್ಲಿವೆ ಎಂದು ತಿಳಿದುಬಂದಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಬಘೇಲ್ , ಕೇರಳ ಸಂಸದ ಡೀನ್ ಕುರಿಯಾಕೋಸ್ ಅವರ ಪ್ರಶ್ನೆಗೆ ಪ್ರತಿಯಾಗಿ ಲೋಕಸಭೆಯಲ್ಲಿ ಮಂಡಿಸಿದರು ಎನ್ನಲಾಗಿದೆ.


ವರದಿಯ ಪ್ರಕಾರ, ದಕ್ಷಿಣ ಭಾರತದ ಐದು ರಾಜ್ಯಗಳು ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣ ಪ್ರಮಾಣವನ್ನು ದಾಖಲಿಸಿದ್ದು, ಇಡೀ ಭಾರತದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಮೂರನೆ ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣಗಳನ್ನು ದಾಖಲಿಸಿದ್ದರೆ, ಕೇರಳ 27 ಮರಣಗಳೊಂದಿಗೆ ನಾಲ್ಕನೆಯ ಸ್ಥಾನದಲ್ಲಿ, ತೆಲಂಗಾಣ 21 ಮರಣಗಳೊಂದಿಗೆ ಐದನೆಯ ಸ್ಥಾನದಲ್ಲಿ ಹಾಗೂ ತಮಿಳುನಾಡು 20 ಮರಣಗಳೊಂದಿಗೆ ಆರನೆಯ ಸ್ಥಾನದಲ್ಲಿದೆ ಎಂದು ವರದಿ ಮಾಡಿದೆ ಎಂದು ವರದಿ ತಿಳಿಸಿದೆ.

Also Read  ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.!➤ ಸುಪ್ರೀಂಕೋರ್ಟ್ *

error: Content is protected !!
Scroll to Top