ವಿಶ್ವಕಪ್ ಗೆ ನಟ ಶಾರುಖ್ ಖಾನ್ ರಾಯಭಾರಿ

(ನ್ಯೂಸ್ ಕಡಬ)newskadaba.com ಮುಂಬೈ, ಜು.24. ಬಾಲಿವುಡ್‌ ನಟ ಶಾರುಖ್ ಖಾನ್ ಅವರು ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ವಿಶ್ವಕಪ್ 2023 ರ ಟೂರ್ನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಪೋಟೋ ಮತ್ತು ಪ್ರೋಮೊವನ್ನು ಹಂಚಿಕೊಂಡಿದೆ.


ಭಾರತವು 2023 ರಲ್ಲಿ ಅಕ್ಟೋಬರ್ 5 ಆರಂಭಗೊಂಡು ನವೆಂಬರ್ 19 ರ ನಡುವೆ ನಡೆಯುವ ಪಂದ್ಯಾಟದಲ್ಲಿ ಹತ್ತು ತಂಡಗಳು ಪ್ರತಿಷ್ಠಿತ ಸ್ಪರ್ಧೆಯಲ್ಲಿ ಸೆಣಸಾಡಲಿದೆ. ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ ಮತ್ತು ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ ಎಂದು ತಿಳಿದುಬಂದಿದೆ.

Also Read  ಮನೆಯಂಗಳಕ್ಕೆ ಬರೋಬ್ಬರಿ 17 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

error: Content is protected !!