ಈ ಊರಲ್ಲಿ ಹಾವು ಇಲ್ಲ ಅಂದ್ರೆ ಮದುವೆನೇ ಆಗಲ್ಲ – ಏನಿದು ವಿಚಿತ್ರ…ಇಲ್ಲಿದೆ ಸ್ಟೋರಿ

(ನ್ಯೂಸ್ ಕಡಬ) newskadaba.com ಛತ್ತೀಸ್​ಗಢ, ಜು. 24. ಛತ್ತೀಸ್‌ಗಢದ ಕೊರ್ಬಾದಲ್ಲಿರುವ ಸನ್ವಾರ ಬುಡಕಟ್ಟು ಜನಾಂಗದವರು ತಮ್ಮ ವಿವಾಹಗಳಲ್ಲಿ ವಿಚಿತ್ರ ಮತ್ತು ವಿಶಿಷ್ಟ ಸಂಪ್ರದಾಯವನ್ನು ಅನುಸರಿಸುತ್ತಾರೆ. ಹಾಗೆಯೇ ಇಲ್ಲಿನ ಜನರು ಹಾವುಗಳನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಒಂದುವೇಳೆ ವರನ ಮನೆಗೆ ವಧುವಿನ ಕಡೆಯವರು ಒಂಬತ್ತು ವಿವಿಧ ಜಾತಿಯ ಹಾವುಗಳನ್ನು ಕೊಂಡೊಯ್ಯಲು ವಿಫಲವಾದಲ್ಲಿ, ಆ ಮದುವೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಈ ಬುಡಕಟ್ಟು ಜನಾಂಗದಲ್ಲಿ ಹಾವನ್ನು ವರದಕ್ಷಿಣೆಯನ್ನಾಗಿ ನೀಡುವ ಪ್ರಾಚೀನ ಸಂಪ್ರದಾಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಸ್ಥಳೀಯ ನಿವಾಸಿ, ಹಾವುಗಳು ಸಮುದಾಯದ ಅಂತರ್ಗತ ಭಾಗವಾಗಿದ್ದು, ಮಹಿಳೆಯು ಮದುವೆಯಾದಾಗ, ಆಕೆಯ ಪೋಷಕರು ವರನ ಮನೆಗೆ ವಿವಿಧ ರೀತಿಯ ಹಾವುಗಳನ್ನು ಕರೆದುಕೊಂಡು ಹೋಗುತ್ತಿದ್ದಾಳೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಈ ಬುಡಕಟ್ಟು ಸಮುದಾಯದ ಮಕ್ಕಳಿಗೂ ಹಾವು ಹಿಡಿಯುವುದು ಗೊತ್ತಿದೆ. ಮಕ್ಕಳು ಅವುಗಳನ್ನು ಹಿಡಿದು ಆಟವಾಡುತ್ತಾರೆ ಎಂದು ಲಾಲ್ ಹೇಳಿದರು. ವರದಕ್ಷಿಣೆಯಾಗಿ ಹಾವುಗಳನ್ನು ಅರ್ಪಿಸುವುದು ತಮ್ಮ ಸಮುದಾಯದಲ್ಲಿ ಪ್ರಮುಖ ಭಾಗವಾಗಿದೆ ಎಂದು ಸ್ಥಳೀಯ ಹಾವಾಡಿಗ ಕಟಂಗಿ ಹೇಳಿದರು. ‘ನಮ್ಮ ಪೂರ್ವಜರು ವರದಕ್ಷಿಣೆಗಾಗಿ 60 ಹಾವುಗಳನ್ನು ನೀಡುತ್ತಿದ್ದರು. ಅದು 14 ಕ್ಕೆ ಇಳಿದಿದೆ. ಈಗ ನಾವು ವರದಕ್ಷಿಣೆಯ ಭಾಗವಾಗಿ 21 (ಹಾವು) ನೀಡುತ್ತೇವೆ. ವರದಕ್ಷಿಣೆ ನೀಡದಿದ್ದರೆ ಸಮಾಜದಲ್ಲಿ ಯಾರೂ ಮದುವೆಯಾಗುವುದಿಲ್ಲ. ಆದ್ದರಿಂದ ನಾವು ಹಾವುಗಳನ್ನು ಹೇಗಾದರೂ ಹುಡುಕಬೇಕು. ವಧುವಿನ ಸಂಬಂಧಿಕರು ಹಾವುಗಳನ್ನು ಸಂಗ್ರಹಿಸಿ ನೀಡುತ್ತಾರೆ’ ಎಂದು ಹೇಳಿದರು. ವರದಕ್ಷಿಣೆಯಲ್ಲಿ ಹಾವುಗಳನ್ನು ಅರ್ಪಿಸುವ ಪದ್ಧತಿಯು ಸನ್ವಾರ ಬುಡಕಟ್ಟಿನ ಹಾವುಗಳನ್ನು ಸಂಗ್ರಹಿಸಿ ಜನರು ತಮ್ಮ ಜೀವನೋಪಾಯಕ್ಕಾಗಿ ಪ್ರದರ್ಶನ ಮಾಡುವುದರೊಂದಿಗೆ ಸಂಬಂಧ ಹೊಂದಿದೆ’ ಎಂದಿದ್ದಾರೆ.

Also Read  ವಿಟ್ಲ: ದಾರಿ ಕೇಳುವ ನೆಪದಲ್ಲಿ ಮಹಿಳೆ ಜತೆ ಅಸಭ್ಯ ವರ್ತನೆ ➤ ಆರೋಪಿ ಅರೆಸ್ಟ್

error: Content is protected !!
Scroll to Top