(ನ್ಯೂಸ್ ಕಡಬ) newskadaba.com ನವದೆಹಲಿ, ಜು. 24. ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ಇದೀಗ ಹೊಸ ಫೀಚರ್ಸ್ ಬಿಡುಗಡೆ ಮಾಡಿದ್ದು, ಬಳಕೆದಾರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ.
ಇಷ್ಟು ದಿನ ವಿಡಿಯೋ ಕಾಲ್ ಮಾಡುವಾಗ ಕೇವಲ ಪೋರ್ಟ್ರೈಟ್ ಮೋಡ್ ಗೆ ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಹೊಸ ಫೀಚರ್‌ನಿಂದಾಗಿ ವಿಡಿಯೋ ಕಾಲ್ ಮಾಡಲು ಬಳಕೆದಾರರು ಮೊಬೈಲ್‌ನ್ನು ಪೋರ್ಟ್ರೈಟ್ ಅಥವಾ ಲ್ಯಾಂಡ್‌ಸ್ಕೇಪ್ ಯಾವುದೇ ಮೂಡ್‌ನಲ್ಲೂ ಕರೆ ಮಾಡಿ ಸಂಭಾಷಣೆ ನಡೆಸಬಹುದು. ಹೊಸ ಫೀಚರ್ ಇದಕ್ಕೆ ಅನುಮತಿ ನೀಡಲಿದೆ.
ವಿಡಿಯೋ ಕಾಲ್ ವೇಳೆ ಮೊಬೈಲ್ ನ್ನು ಲ್ಯಾಂಡ್‌ಸ್ಕೇಪ್ ಮೂಡ್‌ನಲ್ಲಿಟ್ಟು ಸಂಭಾಷಣೆ ನಡೆಸಲು ಬಳಕೆದಾರರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಇದೀಗ ಬಳಕೆದಾರರು ಮೊಬೈಲ್‌ನ್ನು ಲ್ಯಾಂಡ್‌ಸ್ಕೇಪ್ ಮೂಡ್‌ನತ್ತ ತಿರುಗಿಸಿದರೆ ವಿಡಿಯೋ ಕಾಲ್‌ಗೆ ಯಾವುದೇ ಸಮಸ್ಯೆ ಇಲ್ಲ. ಲ್ಯಾಂಡ್‌ಸ್ಕೋಪ್ ಮೂಡ್ ಜೊತೆಗೆ ಕಾಲ್ ಸೈಲೆಂಟ್ ಫೀಚರನ್ನು ವ್ಯಾಟ್ಸಾಪ್ ಪರಿಚಯಿಸಿದೆ. ಈ ಮೂಲಕ ಅನಗತ್ಯ ಸ್ಪ್ಯಾಮ್ ಕಾಲ್, ಅಪರಿಚಿತ ಕರೆಗಳನ್ನು ನಿರ್ಬಂಧಿಸಲು ಸಾಧ್ಯವಿದೆ. ವಾಟ್ಸಾಪ್ ಸೆಟ್ಟಿಂಗ್ ಮೂಲಕ ಪ್ರೈವೈಸಿ ಕಾಲ್ ಆಯ್ಕೆ ಮಾಡಿದಲ್ಲಿ ಕಿರಿಕಿರಿಯಿಂದ ದೂರ ಉಳಿಯಲು ಸಾಧ್ಯವಿದೆ. ಅಪರಿಚಿತ ಮತ್ತು ಸ್ಪ್ಯಾಮ್ ಕರೆಗಳ ಕಿರಿಕಿರಿಯಿಂದ ಬಳಕೆದಾರರಿಗೆ ಮುಕ್ತಿ ನೀಡಲು ಫೋನ್‌ನಲ್ಲಿ ಸೇವ್ ಆಗಿಲ್ಲದ ನಂಬರ್‌ಗಳಿಂದ ಬರುವ ಫೋನ್ ಕರೆಗಳನ್ನು ಸ್ವಯಂಚಾಲಿತವಾಗಿ ಸೈಲೆಂಟ್ ಮಾಡುವ ಹೊಸ ಫೀಚರನ್ನು ಕೂಡಾ ವಾಟ್ಸಾಪ್ ಬಿಡುಗಡೆ ಮಾಡಿದೆ. ಇದಕ್ಕಾಗಿ ವಾಟ್ಸಾಪ್ ಸೆಟ್ಟಿಂಗ್‌ನಲ್ಲಿ ಸೈಲೆಂಟ್ ಅನ್‌ನೋನ್ ನಂಬರ್ಸ್ ಆಯ್ಕೆಯನ್ನು ಎನೇಬಲ್ ಮಾಡಿದರೆ ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ವಾಟ್ಸಾಪ್ ಸೈಲೆಂಟ್ ಮಾಡಲಿದೆ.
ಇಷ್ಟಕ್ಕೇ ಮುಗಿಯದ ವ್ಯಾಟ್ಸ್‌ಆಯಪ್ ಹೊಸ ಫೀಚರ್, ಇದೀಗ ವಾಟ್ಸಾಪ್ ಚಾಟ್ ಟ್ರಾನ್ಸ್‌ಫರ್ ಆಯ್ಕೆಯನ್ನು ನೀಡಿದೆ. ಒಂದು ಫೋನ್‌ನಿಂದ ಮತ್ತೊಂದು ಫೋನ್‌ಗೆ ವಾಟ್ಸಾಪ್ ನ ಚಾಟ್‌ಗಳನ್ನು ಯಾವುದೇ ಅಡೆ ತಡೆ ಇಲ್ಲದೆ ಟ್ರಾನ್ಸ್‌ಫರ್ ಮಾಡಲು ಈ ಫೀಚರ್‌ನಿಂದ ಸಾಧ್ಯವಿದೆ. ಹಳೇ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ ಟ್ರಾನ್ಸ್‌ಫರ್ ಸುಲಭವಾಗಿ ಮಾಡಲು ಸಾಧ್ಯವಿದೆ. ಹೊಸ ಫೀಚರ್‌ನಿಂದ ಐಫೋನ್‌ಗೂ ಚಾಟ್ ಟ್ರಾನ್ಸ್‌ಫರ್ ಮಾಡಲು ಸಾಧ್ಯವಿದೆ. ಇದರ ಜೊತೆಗೆ ವ್ಯಾಟ್ಸ್‌ಆಯಪ್ ಹೊಸ ಹೊಸ ಸ್ಟಿಕ್ಕರ್ ಬಿಡುಗಡೆ ಮಾಡಿದೆ.