(ನ್ಯೂಸ್ ಕಡಬ)newskadaba.com ಪ.ಬಂಗಾಳ, ಜು.24. ಪಾನಿಹಟಿಯಲ್ಲಿ ಮದ್ಯ ಖರೀದಿಗೆ ಬೇಕಾದ ಹಣಕ್ಕಾಗಿ ತಮ್ಮ ಆರು ತಿಂಗಳ ಮಗುವನ್ನೇ ಮಾರಾಟ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಮಕ್ಕಳ ಮಾರಾಟ ಜಾಲವು ಶಾಮೀಲಾಗಿರುವ ಸಾಧ್ಯತೆಯನ್ನು ಪೊಲೀಸರು ತಿಳಿಸಿದ್ದಾರೆ. ಆದರೆ ಮಾರಾಟ ಮಾಡಿರುವ ಮಗು ಇನ್ನೂ ಕೂಡಾ ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಂದೆ ಜೈದೇವ್ ಚೌಧುರಿ ತಾಯಿ ಸತಿ ಚೌಧುರಿ ಹಾಗೂ ತಾತ ಕನಾಯಿ ಚೌಧುರಿ ಎಂಬವರ ಬಂಧನವಾಗಿದ್ದು, ಮಗುವನ್ನು ಯಾರಿಗೆ ಮಾರಾಟ ಮಾಡಿದ್ದಾರೆಂಬ ಬಗ್ಗೆ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
