ತಂಗಿಯ ರುಂಡ ಹಿಡಿದು ಬೀದಿ ಸುತ್ತಿದ ಸಹೋದರ – ವಿಡಿಯೋ ವೈರಲ್..!

(ನ್ಯೂಸ್ ಕಡಬ)newskadaba.com ಬಾರಾಬಂಕಿ, ಜು.22. 24 ವರ್ಷದ ಯುವಕನೊಬ್ಬ ತನ್ನ ಸಹೋದರಿಯನ್ನ ಕೊಂದು, ಕತ್ತರಿಸಿದ ತಲೆಯೊಂದಿಗೆ ತಿರುಗಾಡುತ್ತಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಸಂಭವಿಸಿದ್ದು, ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುವತಿ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿ ಬೇರೆ ಸಮುದಾಯದ ವ್ಯಕ್ತಿಯೊಂದಿಗೆ ಓಡಿಹೋಗಿದ್ದಾಳೆ. ಇದರಿಂದ ಆಕ್ರೋಶಿತನಾದ ಸಹೋದರ ರಿಯಾಜ್, ತನ್ನ ತಂಗಿಯನ್ನ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಧ್ಯ ರಿಯಾಜ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಿಯಾಜ್ ತನ್ನ ಸಹೋದರಿಯ ಕತ್ತರಿಸಿದ ತಲೆಯನ್ನ ಹಿಡಿದುಕೊಂಡು ಬೀದಿಯಲ್ಲಿ ಶಾಂತವಾಗಿ ನಡೆಯುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

Also Read  ಬೆಳ್ತಂಗಡಿ: ಸಿಬ್ಬಂದಿ ನಿರ್ಲಕ್ಷ್ಯದಿಂದ ಕಂದಮ್ಮ ಮೃತ್ಯು - ದೂರು ದಾಖಲು

 

error: Content is protected !!
Scroll to Top