ಕಾರು ಹತ್ತಿಸಿ ಮೂವರು ಮಕ್ಕಳ ಕೊಲೆಗೆ ಯತ್ನ – ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಲಕ್ನೋ, ಜು.19. ನಡೆದುಕೊಂಡು ಹೋಗುತ್ತಿದ್ದ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರಪ್ರದೆಶದ ಲಕ್ನೋದಲ್ಲಿ ನಡೆದಿದೆ.

ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಇಬ್ಬರು ಹುಡುಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಓರ್ವ ಚಿಕ್ಕ ಮಗುವನ್ನು ಎತ್ತಿಕೊಂಡಿದ್ದಾನೆ. ಹೀಗೆ ಅವರು ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿರುವಾಗ ಏಕಾಏಕಿ ಎದುರಿನಿಂದ ಬಂದ ಕಾರನ್ನು ಚಾಲಕ ಮಕ್ಕಳ ಮೇಲೆ ಹತ್ತಿಸಿದ್ದಾನೆ. ಆದರೆ ಅದೃಷ್ಟವಶಾತ್ ಮೂವರು ಮಕ್ಕಳು ಭಾರೀ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Also Read  ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ಜೈಪುರದಲ್ಲಿ ತುರ್ತು ಭೂಸ್ಪರ್ಶ

 

error: Content is protected !!
Scroll to Top