ಗೃಹಲಕ್ಷ್ಮೀ ಯೋಜನೆಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು..! – ಅರ್ಜಿ ಸಲ್ಲಿಕೆ ಹೇಗೆ…? ಇಲ್ಲಿದೆ ಮಾಹಿತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜುಲೈ 19. ಇಂದಿನಿಂದಲೇ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಶುರುವಾಗಲಿದ್ದು, ರಾಜ್ಯದ ಮಹಿಳೆಯರು ಕಾರು ಕುಳಿತಿರುವ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. ಇಂದು ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2 ಸಾವಿರ ಹಣ ಜಮೆಯಾಗಲಿದೆ. ಇನ್ನು ಅರ್ಜಿ ಸಲ್ಲಿಸುವುದು ಎಲ್ಲಿ ? ಏನೆಲ್ಲ ದಾಖಲೆಗಳು ಬೇಕು ಎನ್ನುವ ವಿವರ ಈ ಕೆಳಗಿನಂತಿದೆ.


‘ಗೃಹಲಕ್ಷ್ಮೀ’ ಯೋಜನೆಯಡಿ ಮನೆ ಒಡತಿಗೆ ಪ್ರತೀ ತಿಂಗಳು 2 ಸಾವಿರ ರೂ. ಹಣ ಬರಲಿದೆ. ಇದೇ ಯೋಜನೆ ಅರ್ಜಿ ಸಲ್ಲಿಕೆ ಎಸ್‌ಎಂಎಸ್‌ ಮೂಲಕ ಆರಂಭವಾಗಲಿದೆ. ಮೊದಲಿಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147500500 ಸಂಖ್ಯೆಗೆ SMS ಕಳುಹಿಸಿ. ಎಸ್‌ಎಂಎಸ್‌ ಮಾಡುತ್ತಿದ್ದಂತೆಯೇ ಎರಡೇ ಸೆಕೆಂಡ್‌ನಲ್ಲೇ ಇಲಾಖೆಯಿಂದ ನಿಮಗೆ ಮೇಸೆಜ್‌ ಬರಲಿದೆ. ಅದರಲ್ಲಿ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಬರಲಿದೆ. ಅದೇ ದಿನ, ಅದೇ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಮನೆ ಒಡತಿ ಹೆಸರು ಇರುವ ಪಡಿತರ ಕಾರ್ಡ್‌ ಕಡ್ಡಾಯವಾಗಿದ್ದು, ಇದರ ಜತೆ ಮನೆ ಯಜಮಾನಿಯ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಕೂಡಾ ತೆಗೆದುಕೊಂಡು ಹೋಗಬೇಕು. ಅಲ್ಲದೆ ಮನೆ ಒಡತಿಯ ಪತಿಯ ಆಧಾರ್‌ಕಾರ್ಡ್‌ ಕೂಡಾ ಕಡ್ಡಾಯವಾಗಿದೆ.

Also Read  ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ ಒಂದು ಕೆಲಸ ಮಾಡಿ ಕಷ್ಟಗಳು ಪರಿಹಾರವಾಗುತ್ತದೆ


ಒಂದು ವೇಳೆ ಪತಿ ತೆರಿಗೆದಾರರಾಗಿದ್ದರೆ ಅಂಥವರ ಅಕೌಂಟ್‌ಗೆ ಹಣ ಬರುವುದಿಲ್ಲ. ಇನ್ನು ಆಧಾರ್‌ ಗೆ ಲಿಂಕ್‌ ಆಗಿರೋ ಅಕೌಂಟ್‌ ಬಿಟ್ಟು, ನಿಮ್ಮದೆ ಬೇರೆ ಅಕೌಂಟ್‌ಗೆ ಹಣ ಬೇಕಾದ್ರೆ ಪಾಸ್‌ಬುಕ್‌ನ ಜೆರಾಕ್ಸ್‌ ಪ್ರತಿ ತೆಗೆದುಕೊಂಡು ಹೋಗಬೇಕು. ಗೃಹಲಕ್ಷ್ಮಿಯರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತೆ. ಅಂತೂ ಇಂತೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗ ಗೃಹಲಕ್ಷ್ಮೀ ಯೋಜನೆ ಇಂದಿನಿಂದ ಶುರುವಾಗಲಿದೆ. ಅರ್ಜಿ ಹಾಕಲು ಯಾವುದೇ ಮಧ್ಯವರ್ತಿಗಳ ಮೊರೆಹೋಗುವ ಅಗತ್ಯವಿಲ್ಲ. ಗೊಂದಲವಿದ್ದರೆ 1902 ನಂಬರ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

error: Content is protected !!
Scroll to Top