ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್- ಸಂಚಾರ ನಿಮಯ ಉಲ್ಲಂಘನೆಯ ದಂಡದ ವಿವರ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 19. ಭಾರತದಲ್ಲಿ ಯಾವ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಎಷ್ಟು ದಂಡ ಕಟ್ಟಬೇಕಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಬಹುಮುಖ್ಯ. ಅದರಲ್ಲೂ ವಾಹನಗಳನ್ನು ರಸ್ತೆಗಿಳಿಸಿದಾಗ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೇ ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಹಲವಾರು ಪ್ರಯೋಜನಗಳಿದ್ದು, ಟ್ರಾಫಿಕ್‌ನಲ್ಲಿ ವಾಹನಗಳು ಸುಗಮವಾಗಿ ಚಲಿಸುತ್ತದೆ.


ಸದ್ಯ ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ. ಇದರೊಂದಿಗೆ ಕೆಲವು ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದ ವ್ಯಕ್ತಿ ಜೈಲು ಪಾಲಾಗುವ ಸಾಧ್ಯತೆಯೂ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ಯಾವ ಸಂಚಾರಿ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನು ಇಲ್ಲಿ ಕೆಳಗೆ ತಿಳಿಸಲಾಗಿದೆ.


ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಂಚಾರಿ ನಿಯಮಗಳ ಪರಿಷ್ಕೃತ ದಂಡದ ವಿವರ:
ಅಜಾಗರೂಕತೆ ಚಾಲನೆ – ರೂ. 1000
ಅತೀ ವೇಗದ ಚಾಲನೆ – ರೂ. 2000
ರಸ್ತೆ ಮಧ್ಯದಲ್ಲಿ ನಿಲ್ಲಿಸಿದರೆ – ರೂ.1000
ಸಮವಸ್ತ್ರ ಧರಿಸದೇ ಚಾಲನೆ – ರೂ.500
ಡಿ.ಸಿ ಆದೇಶ ಉಲ್ಲಂಘನೆ – ಕೋರ್ಟ್ ದಂಡ
ಕರ್ಕಶ ಹಾರ್ನ್ – ರೂ.500
ಬಲ್ಬು, ಹಾರ್ನ್ ಅಳವಡಿಸದಿರುವುದು – ರೂ.500
ಬ್ರೇಕ್ ಲೈಟ್ ಇಲ್ಲದೇ ಚಾಲನೆ – ರೂ.500
ಅಮಲು ಪದಾರ್ಥ ಸೇವನೆ – ಕೋರ್ಟ್ ದಂಡ
ಹೆಡ್ ಲೈಟ್ ಇಲ್ಲದೇ ವಾಹನ ಚಾಲನೆ – ರೂ.500
ಕಣ್ಣು ಕುಕ್ಕುವ ಹೆಡ್ ಲೈಟ್ – ರೂ.500
ಸರಕು ವಾಹನದಲ್ಲಿ ಜನರನ್ನು ಸಾಗಿಸುವುದು – ಕೋರ್ಟ್ ಫೈನ್, ಡಿಎಲ್, ಪರ್ಮಿಟ್, ಆರ್.ಸಿ ಕ್ಯಾನ್ಸಲ್.
ಕ್ಯಾಬೀನ್ ನಲ್ಲಿ ಜನರನ್ನು ಕೂರಿಸಿಕೊಂಡು ಹೋಗುವುದು – ಪ್ರತಿ ವ್ಯಕ್ತಿಗೆ ರೂ.200
ಚಾಲಕ ಹಸಿಮೀನು ಹೇರಿ ವಾಹನ ಸಾಗಿಸುವುದು – ರೂ.500
ಪರವಾನಿಗೆ ನಿಬಂಧನೆ ಉಲ್ಲಂಘನೆ ಮಾಡಿರುವುದು – ಕೋರ್ಟ್ ಫೈನ್
ಪೊಲೀಸ್ ನೋಟಿಸ್ ಗೆ ಸಹಿ ಹಾಕದಿರುವುದು, ಅಸಭ್ಯ ರೀತಿಯ ವರ್ತನೆ – ರೂ.2000
ವಾಹನವನ್ನು ಬಸ್ಸು ತಂಗುದಾಣದಲ್ಲಿ ನಿಲ್ಲಿಸಿ ನಿಯಮ ಉಲ್ಲಂಘನೆ – ರೂ.1000
ಡಿಎಲ್ ಇಲ್ಲದೇ ವಾಹನ ಚಾಲನೆ – ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000, ಲಘುವಾಹನ ಚಾಲನೆ ರೂ.2000, ಇತರೆ ರೂ.5000
ಪರಿಶೀಲನೆ ವೇಳೆ ಡಿಎಲ್ ತೋರಿಸದೇ ಇರುವುದು – ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000, ಲಘುವಾಹನ ರೂ.2000. ಇತರೆ ರೂ.5000.
ಡಿಎಲ್ ಇಲ್ಲದವರಿಗೆ ವಾಹನ ಚಾಲನೆಗೆ ನೀಡಿದ್ದು – ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000.
ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ – ಕೋರ್ಟ್ ಫೈನ್
ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆಗೆ ನೀಡಿದ್ದು – ಕೋರ್ಟ್ ಫೈನ್ ಹಾಗೆ 25,000ವರೆಗೆ ದಂಡ ಮತ್ತು 3 ವರ್ಷ ಜೈಲು ಶಿಕ್ಷೆ. ವಾಹನ ನೋಂದಣಿ ರದ್ದು.

Also Read  ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ➤ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹರ್ಷಾಚರಣೆ


ಎಫ್‌ಎ ಬಾಕ್ಸ್ ಅಳವಡಿಸದೇ ಇರುವುದು – ರೂ.500.
ಆರ್ ಸಿ ವಿವರ ಬಾಡಿಗೆಯಲ್ಲಿ ಬರೆಯದೇ ಇರುವುದು – ರೂ.500
ನಂಬರ್ ಪ್ಲೇಟ್ ಇಲ್ಲದೇ, ದೋಷಪೂರಿತ ಬಳಕೆ – ರೂ.500
ಸೈಡ್ ಮಿರರ್ ಇಲ್ಲದಿರುವುದು – ರೂ.500
ಹ್ಯಾಂಡ್ ಬ್ರೇಕ್ ಇಲ್ಲದಿರುವುದು – ರೂ.500
ಖಾಸಗಿ ಕಾರಿನಲ್ಲಿ ಬಾಡಿಗೆ ಮಾಡಿದ್ದು – ಕೋರ್ಟ್ ಫೈನ್.
ದೂರು ಪೆಟ್ಟಿಗೆ ಇಲ್ಲದಿರುವುದು – ರೂ.500
ಅಗ್ನಿ ಶಾಮಕ ಸಾಧನ ಅಳವಡಿಸದಿರುವುದು – ರೂ.500
ದೂಮಪಾನ ಮಾಡುತ್ತ ವಾಹನ ಚಾಲನೆ – ರೂ.500
ಟ್ರಾಫಿಕ್ ಲೈಟ್ ಉಲ್ಲಂಘನೆ – ರೂ.500
ಪೊಲೀಸ್ ಸಿಗ್ನಲ್ ಉಲ್ಲಂಘನೆ – ರೂ.500
ಏಕಮುಖ ರಸ್ತೆಯ ವಿರುದ್ಧ ಚಾಲನೆ – ರೂ.500
ಚಾಲಕ ಬ್ಯಾಡ್ಜ್ ಧರಿಸದ್ದು – ರೂ.500

Also Read  ಪ್ರಥಮ ಪಿಯುಸಿಯಲ್ಲಿ ಫೇಲ್‌ ಆದ​ವರಿಗೂ ‘ಪಾಸ್‌ ಭಾಗ್ಯ​’

 

error: Content is protected !!
Scroll to Top