ತಣ್ಣೀರುಬಾವಿ ಶಿವರಾಜ್ ಹತ್ಯೆ ಪ್ರಕರಣ ► ಮತ್ತಿಬ್ಬರು ಆರೋಪಿಗಳು ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.26. ಇತ್ತೀಚೆಗೆ ಪಣಂಬೂರು ಠಾಣಾ ವ್ಯಾಪ್ತಿಯ ತಣ್ಣೀರುಬಾವಿಯಲ್ಲಿ ನಡೆದ ಶಿವರಾಜ್ ಕರ್ಕೇರಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರದಂದು ನಡೆದಿದೆ.

ಬಂಧಿತ‌ ಆರೋಪಿಗಳನ್ನು ತಣ್ಣೀರುಬಾವಿ ಕೋರ್ದಬ್ಬು ದೈವಸ್ಥಾನ ಬಳಿಯ ಜೀವನ್ ಪಿರೇರಾ(36) ಹಾಗೂ ಕುದ್ರೋಳಿ ಬೆಂಗ್ರೆ ನಿವಾಸಿ ಸತೀಶ್(29) ಎಂದು ಗುರುತಿಸಲಾಗಿದೆ. ಇವರನ್ನು ಕೊಲೆ ಕೃತ್ಯಕ್ಕೆ ಸಂಚು ರೂಪಿಸಲು ಸಹಕರಿಸಿದ್ದ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದೆ.

 

Scroll to Top